ಹೊಸಪೇಟೆ: ವಿಜಯನಗರ ಪುರಾತನ ಕಾಲುವೆಗಳಿಗೆ ನೀರು ನಿಲ್ಲಿಸದಂತೆ ಒತ್ತಾಯಿಸಿ ಇಲ್ಲಿನ ರೈತ ಸಂಘದ ಪದಾಧಿಕಾರಿಗಳು ಕೊಪ್ಪಳದ ಮುನಿರಾಬಾದ್ ನೀರಾವರಿ ಇಲಾಖೆ ವಲಯ ಕೇಂದ್ರದಲ್ಲಿ ಶನಿವಾರ ಎಸ್.ಇ. ಎಲ್.ಬಸವರಾಜ್‌ಗೆ ಮನವಿ ಸಲ್ಲಿಸಿದರು.
ಪ್ರತಿ ವರ್ಷವೂ ವಿಜಯನಗರ ಕಾಲುವೆಗಳಾದ ರಾಯ, ಬಸವ, ಬೆಲ್ಲ, ತುರ್ತಾ ಹಾಗೂ ಕಾಳಘಟ್ಟ ಕಾಲುವೆಗಳ ದುರಸ್ತಿಗೆ ನೀರನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ರೈತರ ಕೃಷಿ ಭೂಮಿಗಳಿಗೆ ಸಮರ್ಪಕ ನೀರು ಲಭಿಸುವುದು ಕಷ್ಟಸಾಧ್ಯವಾಗಲಿದೆ. ಇದರಿಂದ ರೈತರು ಕಳೆದ ಎರಡು ಮೂರು ವರ್ಷಗಳಿಂದ ಆರ್ಥಿಕ ಸಂಕಷ್ಟೀಡಾಗುತ್ತಿದ್ದಾರೆ. ಹೀಗಾಗಿ ಎರಡು ತಿಂಗಳ ಬದಲಾಗಿ ಒಂದು ತಿಂಗಳ ಅವಧಿಗೆ (ಡಿ.10 ರಿಂದ 2025ರ ಜ.10ರ ವರೆಗೆ) ನೀರನ್ನು ಸ್ಥಗಿತಗೊಳಿಸಲು ಕ್ರಮ ವಹಿಸಬೇಕು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ ನಾಯಕ, ನಿರ್ದೇಶಕರಾದ ಉತ್ತಂಗಿ ಕೊಟ್ರೇಶ್, ರಾಂಪುರ ಯಲ್ಲಪ್ಪ, ಜೋಗಯ್ಯ, ಪರಸಪ್ಪ, ಗಾದಿಲಿಂಗಪ್ಪ, ಪ್ರಮುಖರಾದ ಬಿಸಾಟಿ ಕಣಿಮೆಪ್ಪ, ಬೆಳಗೋಡ್ ಅಂಬಣ್ಣ, ತಳವಾರ್ ಮಹೇಶ್, ಕಂಪಿ ್ಲಕಣಿಮೆಪ್ಪ ಇತರರಿದ್ದರು.