ಹೊಸಪೇಟೆ: ಆಯುಧ ಪೂಜೆ ಹಾಗೂ ವಿಜಯದಶಮಿ ನಿಮಿತ್ತ ನಗರಕ್ಕೆ ರಾಶಿಗಟ್ಟಲೆ ಬೂದುಗುಂಬಳ, ಬಾಳೆ, ಹೂವು ಬಂದಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.
ಆಯುಧ ಪೂಜೆಯಂದು ವಾಹನ, ಯಂತ್ರಗಳು, ನಾನಾ ಬಗೆಯ ಮಾರಾಟ ಮಳಿಗೆಗಳಿಗೆ ಪೂಜೆ ಸಲ್ಲಿಸಲು ಬೂದುಗುಂಬಳ ಮತ್ತು ನಿಂಬೆಹಣ್ಣು ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಬೂದಗುಂಬಳ ಮತ್ತು ನಿಂಬೆಹಣ್ಣು ಮಾರುಕಟ್ಟೆಗೆ ಸೇರಿವೆ. ನಗರದ ಎಲ್ಲಾ ಬಡಾವಣೆಯ ರಸ್ತೆಗಳಲ್ಲಿ ಈಗಾಗಲೇ ಮಿನಿ ಮಾರುಕಟ್ಟೆಗಳು ತಲೆಯೆತ್ತಿದ್ದು, ಖರೀದಿ ಆರಂಭವಾಗಿದೆ.
ಹಬ್ಬಕ್ಕೆ ಉಡುಗೊರೆ ನೀಡಲು ಸಿಹಿ ತಿನಿಸುಗಳು ಸೇರಿ ಇತ್ಯಾದಿಗಳ ಖರೀದಿಯೂ ಜೋರಾಗಿ ನಡೆದಿದೆ. ದಸಾರ ಹಬ್ಬದ ನಿಮಿತ್ತ ಕಳೆದ ಒಂದು ವಾರದಿಂದ ಹೂವಿನ ಧರ ಏರುತ್ತಲೇ ಇವೆ. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ನಿಮಿತ್ತ ಇನಷ್ಟು ಬೆಲೆ ಏರಿಕೆಯಾಗಿದ್ದು, ಅನಿವಾರ್ಯಹೂವಿನ ಖರೀದಿಯಲ್ಲಿದ್ದಾರೆ. ಕೆಜಿ ಸೇವಂತಿಗೆ ಹೂವಿಗೆ 160 ರೂ. ಇದ್ದರೆ, ಒಂದು ಮಾರು ಹೂವಿಗೆ ಕೇವಲ 100 ರೂ. ಇದೆ. ಕಾಕಡ ಕೆಜಿ 500 ರಿಂದ 600 ರೂ., ಮಲ್ಲಿಗೆ ಕೆಜಿ 360 ರಿಂದ 500 ರೂ., ಚಂಡುಹುವು ಕೆಜಿ 60 ರಿಂದ 80 ರೂ., ಸುಗಂಧರಾಜ್ 260 ರಿಂದ 300 ರೂ., ಕನಕಂಬರ ಕೆಜಿಗೆ 600 ರೂ. 700 ರೂ., ಗುಲಾಬಿ 300 ರೂ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ