ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಆರಂಭಕ್ಕೆ ರಾಜ್ಯ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.
ನೂತನ ಜಿಲ್ಲೆಯಾಗಿ 4 ವರ್ಷ ಕಳೆದಿದೆ. ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕುಗಳನ್ನು ಒಳಗೊಂಡAತೆ ಪ್ರತ್ಯೇಕವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಸ್ಥಾಪಿಸಲು ಉಚ್ಚ ನ್ಯಾಯಾಲಯ ನಿರ್ಣಯಿಸಿದೆ. ಆದ್ದರಿಂದ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಪೂರಕ ಅಧಿಕಾರಿ ಮತ್ತು ಸಿಬ್ಬಂಧಿ ಹುದ್ದೆಗಳೊಂದಿಗೆ ಸ್ಥಾಪಿಸಲು ಸರ್ಕಾರದ ಮಂಜೂರಾತಿ ನೀಡುಬೇಕು. ನ್ಯಾಯಾಲಯಕ್ಕೆ ಪೀಠೋಪಕರಣಗಳು, ಟೈಪ್‌ರೈಟಸದದಧ, ದೂರವಾಣಿ, ಜೆರಾಕ್ಸ್, ಮುದ್ರೆಗಳು, ರಿಜಿಸ್ಟರ್‌ಗಳು, ಕಂಪ್ಯೂಟರ್‌ಗಳು ಸೇರಿದಂತೆ ಅವಶ್ಯವಿರುವ ಲೇಖನ ಸಾಮಗ್ರಿಗಳು ಒದಗಿಸಲು ಸರ್ಕಾರಿ ಮುದ್ರಣಾಲಯಕ್ಕೆ ನಿರ್ದೇಶನ ನೀಡುವಂತೆ ಹಾಗೂ ಸಹಾಯಕ ಅಥವ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯನ್ನು ಪೂರಕ ಸಿಬ್ಬಂಧಿಯೊAದಿಗೆ ಮಂಜೂರು ಮಾಡುವಂತೆ ಕೇಳಲಾಗಿದೆ. ಇನ್ನೂ ನ್ಯಾಯಾ ಸ್ಥಾಪನೆಗೆ ವರ್ಷದ ಅಂದಾಜು 4.18 ಕೋಟಿ ರೂ. ಅಗತ್ಯವಿದೆ ಎಂದು ಉಚ್ಚ ನ್ಯಾಯಾಲಯದ ರಿಜಿಸ್ಟಾರ್ ಜನರಲ್ ತಿಳಿಸಿದ್ದರು. ಆದ್ದರಿಂದ ಜಿಲ್ಲಾ ನ್ಯಾಯಾಧಿಶರು, ಮುಖ್ಯಾ ಆಡಳಿತಾತ್ಮಕ ಅಧಿಕಾರಿ ಸೇರಿದಂತೆ 57 ಹುದ್ದೆಗಳನ್ನು ಕಾನೂನು, ನ್ಯಾಯಾ ಮತ್ತು ಮಾನವ ಹಕ್ಕುಗಳ ಇಲಾಖೆ ಅಧೀನ ಕಾರ್ಯದರ್ಶಿಎಲ್.ನಾಗೇಶ್ ಆದೇಶಿಸಿದ್ದಾರೆ.