ಸಂವಿಧಾನ ಧರ್ಮ ನಿರಪೇಕ್ಷ

blank

ಹೊಸಪೇಟೆ: ಸಂಶೋಧನಾರ್ಥಿಗಳು ಒಮ್ಮೆ ಸಂವಿಧಾನವನ್ನು ಓದಲೇಬೇಕು ಎಂದು ಸಂಸ್ಕೃತಿ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಕರೆ ನೀಡಿದರು.

blank

ಕನ್ನಡ ವಿವಿಯ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಪಂಪ ಸಭಾಂಗಣದಲ್ಲಿ ಭಾರತ ಸಂವಿಧಾನ ಸಮರ್ಪಣ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಸ್ವತಂತ್ರ ಭಾರತಕ್ಕೆ ಸಂವಿಧಾನ ಸಮರ್ಪಣ ಮಾಡಿದ ದಿನ ನ.26 ಐತಿಹಾಸಿಕವಾಗಿದೆ. ಬಹುಸಂಸ್ಕೃತಿ ಬಹುಧರ್ಮ, ಬಹು ಸಾಮಾಜಿಕ ಸ್ಥಳೀಯ ರಚನೆಗಳಿರುವ ಭಾರತ ದೇಶದಲ್ಲಿ ಬಹುಶಿಸ್ತೀಯ ಜೀವಾಳ ಅಡಗಿರುವ ಸಂವಿಧಾನ ಪುಸ್ತಕವನ್ನೇ ಅಂಬೇಡ್ಕರ್ ನಮಗೆ ಕೊಟ್ಟರು. ಸಂವಿಧಾನ ರಚಿಸುವಾಗ ಅಂಬೇಡ್ಕರ್ ಅವರ ಮುಂದೆ ಅನೇಕ ಸವಾಲುಗಳಿದ್ದವು. ಎಲ್ಲ ಸವಾಲುಗಳ ನಡುವೆಯು ಅಂಬೇಡ್ಕರ್ ಧರ್ಮ ನಿರಪೇಕ್ಷವಾಗಿರುವ ಸಂವಿಧಾನವನ್ನು ಕಟ್ಟುತ್ತಿದ್ದರು. ಪೀಠಿಕೆಯ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಸಂವಿಧಾನದ ತಿದ್ದುಪಡಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಂವಿಧಾನದ ಪರಿಷ್ಕರಣೆಗೆ, ಬದಲಾವಣೆಗೆ ಎಲ್ಲಿಯೂ ಅವಕಾಶ ನೀಡಿಲ್ಲ ಎಂದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಜ್ಞಾನದ ಅಸಮಾನತೆ, ಸಂಪತ್ತಿನ ಅಸಮಾನತೆ, ಸಾಮಾಜಿಕ ಅಸಮಾನತೆಗಳ ನಡುವೆ ಸಂವಿಧಾನ ನಮಗೆ ಸಮಾನತೆ ನೀಡಿದೆ. ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಇದನ್ನು ಗಟ್ಟಿ ಮಾಡುವತ್ತ ನಾವೆಲ್ಲ ಹೆಜ್ಜೆ ಹಾಕೋಣ ಎಂದರು.

ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಮಾತನಾಡಿ, ಜಾತ್ಯಾತೀತ ಪದ ಬಳಕೆಯ ಆಕ್ಷೇಪ ತಳ್ಳಿಹಾಕಿದ ಸುಪ್ರೀಂ ಕೋರ್ಟಿನ ತೀರ್ಮಾನವು ಹೆಮ್ಮೆಯ ವಿಷಯವಾಗಿದೆ. ಸಂವಿಧಾನದ ಒಂದೊAದು ತಿದ್ದುಪಡಿಗಳು ಚರಿತ್ರಾರ್ಹವಾಗಿವೆ. ಸೆಕ್ಯೂಲರಿಸಂ ಜೀವನದ ಪದ್ಧತಿಯಾಗಿದೆ. ಜೀವನದ ಮೌಲ್ಯವಾಗಿದೆ. ಇಂದು ನಾವೆಲ್ಲ ಭಾರತೀಯರು ಎಂಬ ಗೌರವ ಕಡಿಮೆಯಾಗಿ ಧರ್ಮ, ಜಾತಿ, ವಿಜೃಂಭಿಸುತ್ತಿವೆ ಎಂದು ವಿಷಾದಿಸಿದರು.

blank

ಪೀಠದ ಸಂಚಾಲಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಸಂಶೋಧನಾರ್ಥಿ ಮಣಿಕಂಠ ಇತರರಿದ್ದರು.

Share This Article

ಮುಖದ ಸೌಂದರ್ಯಕ್ಕೆ ಐಸ್​​ಕ್ಯೂಬ್.. ಕೂಲ್.. ಕೂಲ್! ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆ.. Ice Facial Benefits

Ice Facial Benefits:  ಮಹಿಳಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು  ಮಾರುಕಟ್ಟೆಯಲ್ಲಿ…

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…