ಮರಿಯಮ್ಮನಹಳ್ಳಿ: ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಪಟ್ಟಣದ ಮುಸ್ಲಿಂ ಸಮಾಜವು ಪಟ್ಟಣದ ಆರಾದ್ಯದೈವಗಳಾದ ಶ್ರೀಲಕ್ಷ್ಮಿನಾರಾಯಣಸ್ವಾಮಿ, ಶ್ರೀ ಆಂಜನೇಯಸ್ವಾಮಿಗಳ ಜೋಡಿರಥಗಳ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಿದೆ.
ಇದರಲ್ಲಿ ವಿಶೇಷ ಏನೆಂದರೆ, ಇಲ್ಲಿನ ಮುಸ್ಲಿಂ ಸಮುದಾಯವು ಕೂಡ, ಉಭಯಸ್ವಾಮಿಗಳ ರಥಗಳ ನಿರ್ಮಾಣಕ್ಕೆ ದೇಣಿಗೆನೀಡಿ ಸೌಹಾರ್ದತೆ ಮೆರೆದಿದ್ದಾರೆ. ಪಟ್ಟಣದ ಮುಸ್ಲಿಂ ಸಮಾಜವು ರಥಗಳ ನಿರ್ಮಾಣಕ್ಕೆ 2,80150ರೂ.ಗಳನ್ನು ದೇಗುಲದ ಅಭಿವೃದ್ದಿಸಮಿತಿಗೆ ನೀಡಿದೆ.
ಉಭಯಸ್ವಾಮಿಗಳ ಜೋಡಿರಥಗಳು ಶಿಥಿಲಗೊಂಡ ಪರಿಣಾಮವಾಗಿ, ದೇಗುಲದ ಅಭಿವೃದ್ದಿಸಮಿತಿಯು ಜೋಡುರಥಗಳ ನಿರ್ಮಾಣ, ದೇವಸ್ಥಾನದ ನವೀಕರಣ ಕೈಗೊಂಡ ಹಿನ್ನೆಲೆಯಲ್ಲಿ ದೇಣಿಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದರೊಂದಿಗೆ ಮುಸ್ಲಿಂ ಸಮುದಾಯದವರು,ಪಟ್ಟಣದ ಆರಾದ್ಯದೈವಗಳ ರಥಗಳನಿರ್ಮಾಣಕ್ಕೆ ದೇಣಿಗೆ ನೀಡುವ ಮೂಲಕ ಸೌಹರ್ದತೆಗೆ ಸಾಕ್ಷಿಯಾಗಿದ್ದಾರೆ.
ಸಮಾಜದ ಮುಖಂಡರಾದ ಎನ್.ಎಸ್.ಬುಡೇನ್ ಸಾಬ್, ಮುತ್ತಾವಲಿ ಫಕೃಸಾಬ್, ಪ.ಪಂ.ಅಧ್ಯಕ್ಷ ಆದಿಮನಿಹುಸೇನ್ ಬಾಷ, ಪ.ಪಂ.ಸದಸ್ಯ ಎಸ್.ಮಹಮದ್, ದೇವಸ್ಥಾನ ಅಭಿವೃದ್ದಿ ಸಮಿತಿಯ ಚಿದ್ರಿಸತೀಶ್, ಗೋವಿಂದರ ಪರಶುರಾಮ, ಜಿ.ಸತ್ಯನಾರಾಯಣಶೆಟ್ಟಿ, ವಿಶ್ವನಾಥ, ರೆಡ್ಡಿಮಾಬುಸಾಬ್, ಖಾಜಮೋದೀನ್, ಹೊನ್ನೂರ ಲಿಸೇರಿದಂತೆ ಇತರರಿದ್ದರು.