ಬ್ರಾಹ್ಮಣರ ಏಳಿಗೆಗೆ ಶ್ರಮಿಸುವೆ – ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ

ಹೊಸಪೇಟೆ: ಬ್ರಾಹ್ಮಣರಲ್ಲೂ ಅನೇಕರು ಬಡತನದಲ್ಲಿದ್ದಾರೆ. ಅಂಥವರ ಏಳಿಗೆಗೆ ಹಾಗೂ ಸಮುದಾಯದ ಹಿತಕ್ಕಾಗಿ ಶ್ರಮಿಸಲಾಗುವುದು ಎಂದು ಬ್ರಾಹ್ಮಣ ಸಂಘದ ತಾಲೂಕು ಗೌರವ ಅಧ್ಯಕ್ಷ ಕೆ.ನರಸಿಂಹಮೂರ್ತಿ(ಅಪ್ಪಣ್ಣ) ತಿಳಿಸಿದರು.

ನಗರದ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ನಡೆದ ಮುಖಂಡರು ಸಭೆಯಲ್ಲಿ ಮಾತನಾಡಿದರು. ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಕಲಿಕೆ ಮುಖ್ಯವಾಗಿದೆ. ಅರ್ಚಕರು, ಭಟ್ಟರು ಆಗಿ ಉಳಿಯುವುದಕ್ಕಿಂತ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಎಲ್ಲ ಪಾಲಕರು ಮುಂದಾಗಬೇಕು. ಆ ಮೂಲಕ ಸರ್ಕಾರದ ಉನ್ನತ ಹುದ್ದೆಗಳನ್ನು ಗಳಿಸುವುದರಿಂದ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ. ಕೇಂದ್ರ ಸರ್ಕಾರವು ಮೇಲ್ವರ್ಗದವರಿಗೂ ಶೇ.10 ಮೀಸಲು ಜಾರಿಗೆ ತಂದಿರುವುದು ಹರ್ಷದಾಯಕ ಎಂದರು.

ತಾಲೂಕು ಘಟಕಕ್ಕೆ ಕೆ.ನರಸಿಂಹಮೂರ್ತಿ(ಗೌರವ ಅಧ್ಯಕ್ಷ), ಕೆ.ದಿವಾಕರ(ಅಧ್ಯಕ್ಷ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಸಮುದಾಯದ ಮುಖಂಡರಾದ ಗೋವಿಂದ ಕುಲಕರ್ಣಿ, ಸೀನಂಭಟ್, ರವಿಶಂಕರ್, ಕೃಷ್ಣಮೂರ್ತಿ(ಕಿಟ್ಟಪ್ಪ), ಅನಂತ ಪದ್ಮನಾಭ, ವೆಂಕಟೇಶ ಮೂರ್ತಿ, ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್ ಇತರರಿದ್ದರು.