ಒತ್ತಡ ನಿಭಾಯಿಸುವ ಶಕ್ತಿ ಸರ್ಕಾರಕ್ಕಿದೆ

< ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನಂಬಿಕೆ> ಶೀಘ್ರವೇ ಬಗೆಹರಿಯಲಿವೆ ಸಮಸ್ಯೆಗಳು>

ಹೊಸಪೇಟೆ (ಬಳ್ಳಾರಿ): ಅನಿವಾರ್ಯ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಆದರೆ, ಯಾವುದೇ ಕಾರಣಕ್ಕೂ ಈ ಸರ್ಕಾರ ಮುರಿದು ಬೀಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಷ್ಟೇ ಒತ್ತಡ, ಷಡ್ಯಂತ್ರಗಳ ಎದುರಾದರು ಅವುಗಳನ್ನು ಮೆಟ್ಟಿ ನಿಂತು ನಿಭಾಯಿಸೋ ಶಕ್ತಿ ಸರ್ಕಾರಕ್ಕಿದೆ. ಒಂದೇ ಪಕ್ಷದ ಸರ್ಕಾರ ರಚನೆಯಾದರೂ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಇನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಸಮಸ್ಯೆಗಳು ಇದ್ದೇ ಇರುತ್ತದೆ. ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳೆ ಹಾಗೂ ಬಾಲಚಂದ್ರ ಜಾರಕಿಹೊಳಿ ಎಲ್ಲರೂ ಸಚಿವರಾದದವರೇ. ಅವರೆಲ್ಲಾ ಒಂದೇ. ಸಿದ್ದರಾಮಯ್ಯಗೆ ಪರಿಸ್ಥಿತಿ ಗೊತ್ತಿದೆ. ಸತೀಶ್ ಜಾರಕಿಹೊಳಿ ಬ್ರದರ್ಸ್‌ ಅವರ ಮಾತು ಕೇಳುತ್ತಾರೆ. ಸ್ವಲ್ಪದಿನ ಸಿಟ್ಟು ಇರುತ್ತದೆ, ನಂತರ ಎಲ್ಲವೂ ಸರಿ ಹೋಗ್ತುತದೆ. ತೀರ ಸಮಸ್ಯೆ ಎದುರಾದರೆ ದೇವೇಗೌಡರು, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕುಮಾರ್ ಸ್ವಾಮಿ ಅವೆಲ್ಲವನ್ನು ಸರಿ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಬಸವರಾಜ್ ಹೊರಟ್ಟಿಗಿದೆ. ನಿಗಮಮಂಡಳಿ ವಿಚಾರದಲ್ಲಿ ಮುಖ್ಯಮಂತ್ರಿಯನ್ನು ಕೇಳದೇ ನಿರ್ಧಾರ ತೆಗೆದುಕೊಂಡಿದ್ದಾರೆಂಬ ಅಸಮಾಧಾನವಿದೆ ಎನ್ನುವುದು ಹೊರಟ್ಟಿ ಮಾತು. ಇಂಥ ಅಸಮಾಧಾನವನ್ನು ಸಿಎಂ ಮಾತಾಡಿಲ್ಲ. ಅಂತ ಸಂದರ್ಭ ಬಂದಾಗ ದೇವೇಗೌಡರು ಸರಿಪಡಿಸುತ್ತಾರೆ ಎಂದರು.