ಐತಿಹಾಸಿಕ ದೇವರ ಬನ್ನಿ ಉತ್ಸವ ಸಂಪನ್ನ

blank

ಹೊಸಪೇಟೆ: ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ ದೇವರ ಬನ್ನಿ ಉತ್ಸವದ ನಿಮಿತ್ತ ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಧರ್ಮದಗುಡ್ಡದಲ್ಲಿ ಶುಕ್ರವಾರ ಸಂಜೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶಕ್ತಿ ದೇವತೆಗಳ ಸಮ್ಮಿಲನವನ್ನು ಕಣ್ತುಂಬಿಕೊAಡು ಉತ್ಸವಕ್ಕೆ ಸಾಕ್ಷಿಯಾದರು.

ವಿಜಯದಶಮಿಗೂ ಮುನ್ನದಿನ ನವಮಿಯಂದು ಧರ್ಮದಗುಡ್ಡದಲ್ಲಿನ ಶ್ರೀ ಚನ್ನಬಸವೇಶ್ವರಸ್ವಾಮಿ ಮತ್ತು ಶ್ರೀ ನಿಜಲಿಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬಸವನದುರ್ಗ ಗ್ರಾಮದಿಂದ ಆಗಮಿಸಿದ ಶ್ರೀ ಚನ್ನಬಸವೇಶ್ವರ ಸ್ವಾಮಿ ಉತ್ಸವಮೂರ್ತಿಯ ಪಲ್ಲಕ್ಕಿ ಜತೆಗೆ ತಾಲೂಕಿನ ವಿವಿಧೆಡೆಗಳಿಂದ 20ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬಂದ ಭಕ್ತರು, ಗುಡ್ಡದ ಕೆಳಗಿರುವ ಶಮಿವೃಕ್ಷಕ್ಕೆ ಪ್ರದಕ್ಷಣೆ ಹಾಕಿ ಮೂಲ ಸ್ಥಳಕ್ಕೆ ತೆರಳುವ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಭಕ್ತರು ನಮಿಸಿ ಭಕ್ತಿ ಸಮರ್ಪಿಸಿದರು.

ಐತಿಹಾಸಿಕ ಪ್ರಕೃತಿದತ್ತ ಧರ್ಮದಗುಡ್ಡದ ಬಂಡೆಯ ಆಸರೆಯಲ್ಲಿ ನೆಲೆಸಿರುವ ಶ್ರೀಚನ್ನಬಸವೇಶ್ವರಸ್ವಾಮಿ ಮತ್ತು ನಿಜಲಿಂಗಮ್ಮ ದೇವಿಯು ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಆಯುಧ ಪೂಜೆಯಂದು ನಡೆಯುವ ದೇವರ ಬನ್ನಿ ಉತ್ಸವ ಜಾತ್ರೆಯಂತೆ ನಡೆಯುವುದೇ ಇಲ್ಲಿನ ವಿಶೇಷ. ಧರ್ಮದಗುಡ್ಡದಲ್ಲಿ ಪಾಂಡವರು ನೆಲೆಸಿದ್ದರು. ಶಿವನು ತಪಸ್ಸಿಗೆ ಹೋದಾಗ ನಂದಿ ಧರ್ಮದಗುಡ್ಡಕ್ಕೆ ಬಂದಿದ್ದನು ಎಂಬುದು ನಂಬಿಕೆ. ಬಸವನದುರ್ಗದ ಗುಡ್ಡದ ಚನ್ನಬಸವೇಶ್ವರ, ಬಾಣದಕೇರಿ ನಿಜಲಿಂಗಮ್ಮ, ತಳವಾರಕೇರಿ ರಾಂಪುರ ದುರ್ಗಮ್ಮ, ಮ್ಯಾಸಕೇರಿ ಹುಲಿಗೆಮ್ಮ, ಕಮಲಾಪುರ ಗೋನಾಳ್‌ಕೇರಿ ನಿಜಲಿಂಗಮ್ಮ, ನಾಗೇನಹಳ್ಳಿ ಹುಲಿಗೆಮ್ಮ, ನಾಗೇನಹಳ್ಳಿ ಹರಿಜನಕೇರಿ ಹುಲಿಗೆಮ್ಮ, ನರಸಾಪುರ ಮಾಗಣಿಯ ಹಾಲಮ್ಮ, ಕೊಂಡನಾಯಕನಹಳ್ಳಿ ದುರ್ಗಮ್ಮ, ಮಲಪನಗುಡಿ ತಾಯಮ್ಮ, ಉಕ್ಕಡಕೇರಿ ಹುಲಿಗೆಮ್ಮ, ಹರಿಜನಕೇರಿ ಮಾಯಮ್ಮ, ರಾಂಪುರ ದುರುಗಮ್ಮ, ಜಂಬುನಾಥರಸ್ತೆ ಹರಿಜನಕೇರಿ ಹುಲಿಗೆಮ್ಮ, ಅನಂತಶಯನಗುಡಿ ಹರಿಜನಕೇರಿ ದುರ್ಗಮ್ಮ, ಚೆಲುವಾದಿಕೇರಿ ಯಲ್ಲಮ್ಮ, 5ನೇ ವಾರ್ಡ್ ಕೆಂಚಮ್ಮ, ಚಿತ್ತವಾಡ್ಗಿ ವರಕೇರಿ ನಿಜಲಿಂಗಮ್ಮ, ಮನ್ಮಥಕೇರಿ ಕಮಲಾಪುರದ ನೆರಗಲ್ಲಮ್ಮ ದೇವಿ, ಕಮಲಾಪುರ ಬಂಡಿಕೇರಿ ಹುಲಿಗೆಮ್ಮ ದೇವಿ, ಕಮಲಾಪುರ ತಿಮ್ಮನಾಥಕೇರಿ ತಾಯಮ್ಮ ದೇವಿ ಉತ್ಸವ ಮೂರ್ತಿಗಳ ಹೊತ್ತ ಪಲ್ಲಕ್ಕಿಗಳು ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಮೂಲ ಸ್ಥಳಕ್ಕೆ ಮರಳಿದವು.

Share This Article

ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿದ್ರೆ ಏನಾಗುತ್ತೆ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು ಇಲ್ಲದಿದ್ರೆ ಅಪಾಯ ಫಿಕ್ಸ್! Water

Water : ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ನೀವು ಈ…

Banana Peel : ನೀವೂ ಬಾಳೆಹಣ್ಣು ತಿಂದ ನಂತರ ಸಿಪ್ಪೆ ಎಸೆಯುತ್ತೀರಾ? ಇದನ್ನು ಈ ರೀತಿ ಬಳಸಿ ಬಿಡಿ..

 ಬೆಂಗಳೂರು: ( Banana Peel ) ಸೊಳ್ಳೆಗಳು ರಾತ್ರಿ ನಿದ್ರೆಗೆ ಭಂಗ ತರುವುದಲ್ಲದೆ ನಾನಾ ರೋಗಗಳಿಗೆ…

ಒಬ್ಬ ವ್ಯಕ್ತಿ ಸತ್ತ ನಂತರ ಏನಾಗುತ್ತದೆ? ನರ್ಸ್​ ಹೇಳಿದ ಭಯಾನಕ ಸಂಗತಿ ವೈರಲ್​ | Death

Death : ಒಬ್ಬ ವ್ಯಕ್ತಿ ಸತ್ತ ನಂತರ ದೇಹದಲ್ಲಿ ಏನಾಗುತ್ತದೆ ಎಂಬ ಮಾಹಿತಿಯನ್ನು ಅಮೆರಿಕ ಮೂಲದ…