ಹೊಸಪೇಟೆ: ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ಅರ್.ಗವಿಯಪ್ಪ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಗರದ ಎಪಿಎಂಸಿಯಲ್ಲಿ ಗುರುವಾರ ಆರ್ ಐಡಿಎಫ್ -29 ರ ಯೋಜನೆಯಡಿ 1.91 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಸಿಸಿ ರಸ್ತೆ ಒಳಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ನಡೆಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ರೈತರಿಗೆ ಯಾವುದೇ ರಜೆ ಇಲ್ಲ ಹಾಗಾಗಿ ಪ್ರತಿದಿನ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯನಿರ್ವಹಿಸಬೇಕು. ಈಗಾಗಲೇ ನಿರ್ಮಿತಿ ಕೇಂದ್ರದಿAದ 2 ಕೋಟಿ ರೂ. ವೆಚ್ಚದ ಕಾಮಗಾರಿ ನಡರದಿದೆ. ಈಗ 1.91 ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯುತ್ತಿದೆ. ಶಿಥಿಲ ಘಟಕಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಮುಂದೆ ವರ್ಷದೊಳಗೆ ಆರಂಭ ಮಾಡಲು ಕ್ರಮಕೈಗೊಳ್ಳುವೆ. ಎಂಪಿಎAಸಿ ತರಕಾರಿ ಮಾರುಕಟ್ಟೆಯಂತೆ ಆಗಿದೆ. ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಸೂಚನೆ ನೀಡುತ್ತೇನೆ . ಇಲ್ಲಿ ವ್ಯಾಪರ ಹೆಚ್ಚಿಸಲು ಬೇಕಾದ ಸೌಕರ್ಯ ಒದಗಿಸಬೇಕಿದೆ. ಇನಷ್ಟು ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ಮುಂದಾಗುತ್ತೇವೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಗುಣಮಟ್ಟದಿಂದ ಕಾಮಗಾರಿಯನ್ನು ನಡೆಸಬೇಕು ಎಂದು ತಾಕೀತು ಮಾಡಿದರು.
ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಎಇಇ ಸಂದರ್ಶನ, ವರ್ತಕರಾದ ರಾಘವೇಂದ್ರ ಶೆಟ್ಟಿ, ಭದ್ರಿನಾರಾಯಾಣ, ನಾಗೇಂದ್ರ ಇತರರಿದ್ದರು.