ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಇಲಾಖೆಯಯಿಂದ ವಿವಿಧ ಯೋಜನೆಯಡಿ ನಗರದ ಟೌನ್ ರೀಡಿಂಗ್ ಹಾಲ್ ಆವರಣದಲ್ಲಿ ಶುಕ್ರವಾರ ಸಂಜೆ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ಫೋನ್ ವಿತರಣೆ ಮತ್ತು ವಿಕಲಚೇತನರಿಗೆ ಬೈಕ್ ಹಾಗೂ ಸಲಕರಣೆ ವಿತರಣೆ ಕಾರ್ಯಕ್ರಮ ನಡೆಯತು.
ಶಾಸಕ ಎಚ್.ಆರ್.ಗವಿಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತರ ಜವಾಬ್ದಾರಿಯು ಮಹತ್ವದ್ದಾಗಿರುತ್ತದೆ, ಮೊಬೈಲ್ ವಿತರಣೆ ಮಾಡಿರುವುದು ಅವರು ಟೆಕ್ನಾಲಜಿ ಜತೆ ಹೊಂದಿಕೊಳ್ಳಲು ಸಹಾಯಕವಾಗಲಿದೆ. ಅದರಿಂದ ಮಕ್ಕಳ ಚಟುವಟಿಕೆಗಳನ್ನು ಮೊಬೈಲ್ ಮೂಲಕ ಅಪ್ಡೇಟ್ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಊಟಕ್ಕೆ ಏರ್ಪಾಡು ಮಾಡಿ ಅಂಗನವಾಡಿ ಕಾರ್ಯಕರ್ತರ ಸಭೆಯನ್ನು ನಡೆಸುತ್ತೇನೆ ಎಂದರು.
ಎಲ್ಲರAತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು. ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ವಿಜಯನಗರದಲ್ಲಿ ಇವರ ಸಂಕಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ಹೆಚ್ಚಿನ ಕಾರ್ಯಕ್ರಮಗಳ ಅಗತ್ಯವಿದೆ. ಎಂದು ಆಭಿಪ್ರಾಯಪಟ್ಟರು.
ಹೂಡಾ ಅಧ್ಯಕ್ಷ ಇಮಾಮ್ ನಿಯಾಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ, ಸಿಡಿಪಿಒ ಸಿಂಧೂ ಯಲಿಗಾರ್ ಇತರರಿದ್ದರು.