ಹೊಸಪೇಟೆ: ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತಾಲುಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಚುನಾವಣೆ ಸೋಮವಾರ ನಡೆಯಿತು.
ಅಧ್ಯಕ್ಷರಾಗಿ ಗುಜ್ಜಲ ಹುಲುಗಪ್ಪ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬಿಸಾಟಿ ಗುರುಮೂರ್ತಿ, ಖಜಾಂಚಿಯಾಗಿ ಡಿ.ಹನುಮಂತಪ್ಪ, ಜಿಲ್ಲಾ ಪ್ರತಿನಿಧಿಯಾಗಿ ಬಂಡೆ ಶ್ರೀನಿವಾಸ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಣ್ಣ ಜಂಬಣ್ಣ ಚುನಾವಣಾ ವೀಕ್ಷಕಿ ಪ್ರೀಯಾಂಕ ಫಲಿತಾಂಶ ಘೋಷಿಸಿದರು.
ಕೃಷಿ ಇಲಾಖೆ ಸ್ಥಾನಿಕಾಧಿಕಾರಿಗಳಾದ ಲಿಂಗರಾಜ, ಸಂತೋಶ, ತಿಮ್ಮಪ್ಪ, ಈರಪ್ಪ, ಎಚ್.ಪರಮೇಶ್ವರನಾಯ್ಕ ಇದ್ದರು.