More

    ಹೊಸದುರ್ಗದಲ್ಲಿ ಜೈನ ಧರ್ಮಚಕ್ರ ಆರಾಧನೆ, ಸುವರ್ಣ ಮಹೋತ್ಸವ

    ಹೊಸದುರ್ಗ: ಪಟ್ಟಣದ ಭಗವಾನ್ ಪಾರ್ಶ್ವನಾಥಸ್ವಾಮಿ ಜಿನಮಂದಿರಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೇ 20, 21 ಮತ್ತು 22 ರಂದು ಧರ್ಮಚಕ್ರ ಆರಾಧನಾ ಹಾಗೂ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಜೈನ್ ಸಮಾಜದ ಅಧ್ಯಕ್ಷ ಡಿ.ಆದಿರಾಜಯ್ಯ ತಿಳಿಸಿದರು.

    ಪಟ್ಟಣದ ಪಾರ್ಶ್ವನಾಥಸ್ವಾಮಿ ಮಂದಿರದಲ್ಲಿ ಮಂಗಳವಾರ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಜೈನ ಸಮಾಜದ ಸಭೆಯಲ್ಲಿ ಮಾತನಾಡಿದರು.

    1969 ರಲ್ಲಿ ಹೊಸದುರ್ಗದಲ್ಲಿ ಭಗವಾನ್ ಪಾರ್ಶ್ವನಾಥಸ್ವಾಮಿ ತ್ರಿಕೂಟ ಚೂಡಾಮಣಿ ಜಿನಮಂದಿರ ಸ್ಥಾಪನೆ ಮಾಡಿ ಅಂದಿನ ಹೊಂಬುಜ ಜೈನಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನೆ ಮಾಡಲಾಗಿತ್ತು.

    ದೇವಾಲಯಕ್ಕೆ 50 ವರ್ಷ ತುಂಬಿರುವ ಹಾಗೂ ಜಿನಮಂದಿರ ನಿರ್ಮಾಣದ ನಂತರ ಜೈನ ಸಮುದಾಯ ಅಭಿವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ಜೈನ ಗುರುಗಳು, ವಿಧ್ವಾಂಸರು ಹಾಗೂ ಸಾಧಕರ ಮಾರ್ಗದರ್ಶನದಲ್ಲಿ ಈ ಮಹೋತ್ಸವ ಆಯೋಜಿಸಲಾಗಿದೆ ಎಂದರು.

    ಸಾಧಕರ ಮಾರ್ಗದರ್ಶನ

    ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಹೊಂಬುಜ ಮಠದ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದಾ ಮಠದ ಶ್ರೀ ಅಕಲಂಕಕೇಸರಿ ಭಟಾಕಲಂಕ ಭಟ್ಟಾರಕ ಸ್ವಾಮೀಜಿ ಭಾಗವಹಿಸುವರು.

    ಸಿಂಹಗದ್ದೆ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಪತ್ರಕರ್ತ ಅಜಿತ್ ಹನುಮಕ್ಕನವರ್, ನೂತನ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್, ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್ ಉಪಸ್ಥಿತರಿರುವರು ಎಂದರು.

    ಸಾಹಿತಿ ಸುಮತೀಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಮುಖಂಡರಾದ ಇ.ವಿ.ಅಜ್ಜಪ್ಪ, ಇ.ವಿ.ಅಶೋಕ, ಮಾಜಿ ಪುರಸಭಾ ಸದಸ್ಯ ಬ್ರಹ್ಮಪಾಲ್, ಇಂದ್ರಕುಮಾರ್, ಸುರೇಶ್ ಜೈನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts