More

    ಹೊಸರಿತ್ತಿಯ ಗುರುಕುಲದ ರೂವಾರಿ ಗೋಪಣ್ಣ ಕುಲಕರ್ಣಿ ಇನ್ನಿಲ್ಲ..

    ಹಾವೇರಿ: ತಾಲೂಕು ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲದ ರೂವಾರಿ, ಸ್ವಾತಂತ್ರೃ ಹೋರಾಟಗಾರ ಹಳ್ಳಿಕೇರಿ ಗುದ್ಲೆಪ್ಪನವರ ಆಪ್ತ ಅನುಯಾಯಿ ಹಾಗೂ ನಿವೃತ್ತ ಶಿಕ್ಷಕ ಗೋಪಣ್ಣ ಕುಲಕರ್ಣಿ (92) ಗುರುವಾರ ನಿಧನ ಹೊಂದಿದರು. ಗುದ್ಲೆಪ್ಪ ಹಳ್ಳಿಕೇರಿ ಅವರ ಕನಸಾದ ಗುರುಕುಲ ಪ್ರಾರಂಭಿಸುವಲ್ಲಿ ಗೋಪಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಬ್ರಹ್ಮಚಾರಿಯಾಗಿದ್ದ ಗೋಪಣ್ಣ ನಾಡ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸರ್ಕಾರದ ಸಂಬಳವನ್ನು ಸಂಸ್ಥೆಯ ಅಭಿವೃದ್ಧಿಗೆ ಬಳಸಿದ್ದರು. ಇವರ ನಿಸ್ವಾರ್ಥ ಸೇವೆ ಗಮನಿಸಿದ ಗುದ್ಲೆಪ್ಪ ಅವರು ಗುರುಕುಲ ಆರಂಭಿಸುವ ಮಹತ್ತರ ಜವಾಬ್ದಾರಿ ನೀಡಿದ್ದರು. ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಗುರುಕುಲಕ್ಕೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಆರ್.ಗುಂಡೂರಾವ್, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿರುವುದು ಹೆಗ್ಗಳಿಕೆ.
    ಧಾರ್ಮಿಕ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಗೋಪಣ್ಣ ಮಂತ್ರಾಲಯ ಮಠದ ಪರಮ ಶಿಷ್ಯರಾಗಿದ್ದರು. ಈ ಹಿಂದೆ ಧರ್ಮದರ್ಶಿಯೂ ಆಗಿದ್ದ ಇವರು ಹೊಸರಿತ್ತಿ ರಾಯರ ಮಠ ಸೇರಿದಂತೆ ರಾಜ್ಯದ ಹಲವು ರಾಯರ ಮಠಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಸಂತಾಪ: ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲದ ಅಧ್ಯಕ್ಷರು, ಮುಖ್ಯೋಪಾಧ್ಯಾಯರು ಹಾಗೂ ಸದಸ್ಯರು ಸೇರಿದಂತೆ ಜಿಲ್ಲೆ ಹಾಗೂ ನಾಡಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts