ಹಳ್ಳಿ ಮಕ್ಕಳ ಬದುಕಿನ ಚಿತ್ರ ‘ವಿರುಪಾ’ ಬಿಡುಗಡೆ 12ರಂದು

ನಿರ್ದೇಶಕ ಪುನೀಕ್ ಶೆಟ್ಟಿ ಹೇಳಿಕೆ ಹಂಪಿ ಪರಿಸರದಲ್ಲೇ ಸಂಪೂರ್ಣ ಚಿತ್ರೀಕರಣ

ಹೊಸಪೇಟೆ: ಹಳ್ಳಿ ಮತ್ತು ನಗರ ಪ್ರದೇಶದ ಮಕ್ಕಳ ಮನಸ್ಥಿತಿ, ಕನಸು ಭಿನ್ನವಾಗಿರಲಿದೆ. ಇಂಥ ವಿಭಿನ್ನ ಕನಸಿನ ಆಲೋಚನೆಯಲ್ಲಿ ಹಳ್ಳಿ ಮಕ್ಕಳ ಬದುಕಿನ ಸಂಪೂರ್ಣ ಕಥೆ ಆಧಾರಿತ ಕಲಾತ್ಮಕ ಹಾಗೂ ಸ್ಥಳೀಯ ಮತ್ತು ವಿದೇಶಿ ಕಲಾವಿದರ ಅಭಿನಯಿಸಿರುವ ‘ವಿರುಪಾ’ ಚಿತ್ರವು ಏ.12ರಂದು ರಾಜ್ಯಾದ್ಯಂತ 56 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಪುನೀಕ್ ಶೆಟ್ಟಿ ತಿಳಿಸಿದರು.

ಡುಬೋಯ್ಸ ಪ್ರೊಡೆಕ್ಷನ್ ನಿರ್ಮಾಣದ ಚಿತ್ರ ಹಂಪಿ, ಕಡ್ಡಿರಾಂಪುರ, ಹೊಸಪೇಟೆಯಲ್ಲಿ ಚಿತ್ರೀಕರಣಗೊಂಡಿದ್ದು, ಬಾಲಕರಾದ ಭಟ್ಕಳದ ಶಾಯಲ್(ಕುರುಡ), ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಚರಣ್(ಮೂಕ) ಮತ್ತು ಹೊಸಪೇಟೆಯ ವಿಷ್ಣು ಅಭಿನಯಿಸಿದ್ದಾರೆ. ಮಕ್ಕಳಲ್ಲಿ ಬದಲಾಗಿ ಸಂಬಂಧ, ಪ್ರೀತಿ ಇರಲಿದೆ ಎನ್ನುವ ಸಂದೇಶವೂ ಚಿತ್ರದ ತಿರುಳಾಗಿದೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವವಿಖ್ಯಾತ ಹಂಪಿಯಲ್ಲಿ ಮಕ್ಕಳೇ ಮಾರ್ಗದರ್ಶಕರಾಗಿ ಕಾಯಕ ನಡೆಸುವಂಥ ಕಥೆ ಸಾಗುತ್ತಿದ್ದು, 27 ದಿನಗಳ ಕಾಲ ಹಂಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಪುಟಾಣಿಗಳು ಸೇರಿ 50ಕ್ಕೂ ಅಧಿಕ ಸ್ಥಳೀಯ ಮತ್ತು ಫ್ರಾನ್ಸ್, ರಷ್ಯಾ, ಆಫ್ರೀಕಾದ 30 ವಿದೇಶಿಗರು, ರಂಗಭೂಮಿ ಕಲಾವಿದೆ ಮರಿಯಮ್ಮನಹಳ್ಳಿ ನಾಗರತ್ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ಮುಳ್ಳೂರು ಅವರ ಸಂಗೀತ, ಅನಂತರಾಜ್ ಅರಸ್ ಕ್ಯಾಮರಾ ಕೈಚಳಕ ಉತ್ತಮವಾಗಿದೆ ಎಂದರು.

ರಂಗಕರ್ಮಿ ಹೊಸಪೇಟೆಯ ಪಿ.ಅಬ್ದುಲ್ಲಾ, ಚಿತ್ರದ ನಟರಾದ ಚಂದ್ರಶೇಖರ್, ಮಂಜುನಾಥ, ವಿಷ್ಣು ಇತರರಿದ್ದರು.