ಮಳೆಗೆ ಪ್ರಾರ್ಥಿಸಿ ಹಂಪಿಯಲ್ಲಿ ಪರ್ಜನ್ಯ ಹೋಮ

ಹೊಸಪೇಟೆ: ಮಳೆಗಾಗಿ ಪ್ರಾರ್ಥಿಸಿ ಹಂಪಿಯ ಶ್ರೀ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಗುರುವಾರ ಪರ್ಜನ್ಯ ಹೋಮ ನಡೆಯಿತು. ಸ್ವಾಮಿಯ ಉತ್ಸವ ವಿಗ್ರಹಕ್ಕೆ ಕಳಸ ಪ್ರತಿಷ್ಠಾಪಿಸಿ ಬೆಳಗ್ಗೆ 6.30ಕ್ಕೆ ಪೂಜೆ ನೆರವೇರಿಸಲಾಯಿತು.

ನಂತರ ದೇವಸ್ಥಾನ ಹಿಂಭಾಗದ ಲೋಕಪಾವನ ಪುಷ್ಕರಣಿ ಬಳಿ ಮೊದಲು ಗಣೇಶ ಪೂಜೆ ನೆರವೇರಿಸಿ ಪ್ರಧಾನ ಅರ್ಚಕ ಬಿ.ಶ್ರೀನಾಥ, ಸಹಾಯಕ ಅರ್ಚಕ ರವಿಪಾಟೀಲ್ ಸೇರಿ ಇತರರು ಪರ್ಜನ್ಯ ಹೋಮ ನೆರವೇರಿಸಿದರು. ಭಕ್ತರು ಪಾಲ್ಗೊಂಡಿದ್ದರು. ಪೂರ್ಣಾಹುತಿ ನಂತರ ಪುಷ್ಕರಣಿಯಲ್ಲಿ ನಿಂತು ಅರ್ಚಕರು ಜಪ ಮಾಡಿದರು.

ದೇವಸ್ಥಾನದ ಇಒ ಎಂ.ಎಚ್.ಪ್ರಕಾಶರಾವ್, ಸಹಾಯಕ ಅಧಿಕಾರಿ ಶ್ರೀನಿವಾಸ, ಪಂಪಣ್ಣ, ಮಲ್ಲೇಶಿ ಇತರರಿದ್ದರು. ಇಲಾಖೆಗೊಳಪಟ್ಟ ನಗರದ ಶ್ರೀ ವಡಕರಾಯ ಸ್ವಾಮಿ, ಹೊಸೂರಿನ ಶ್ರೀ ಹೊಸೂರಮ್ಮ, ಬುಕ್ಕಸಾಗರದ ಏಳುಹೆಡೆ ನಾಗಪ್ಪ ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ ನಡೆಯಿತು.

Leave a Reply

Your email address will not be published. Required fields are marked *