Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಗಣನಾಯಕಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ

Sunday, 16.09.2018, 6:24 PM       No Comments
<ಗಣೇನ ಟ್ರಾೃಕ್ಟರ್ ಚಾಲನೆ ಮಾಡಿ ಗಮನ ಸೆಳೆದ ವಿಜಯನಗರ ಶಾಸಕ ಆನಂದ ಸಿಂಗ್>

ಹೊಸಪೇಟೆ:  ನಗರದ 176 ಗಣೇಶ ವಿಗ್ರಹಗಳ ವಿಸರ್ಜನೆ ಶನಿವಾರ ರಾತ್ರಿ ಶ್ರದ್ಧೆ, ಭಕ್ತಿಯಿಂದ ಅದ್ದೂರಿಯಾಗಿ ನಡೆಯಿತು.

ಈ ವೇಳೆ ನಾನಾ ವಾಹನಗಳನ್ನು ಅಲಂಕರಿಸಿ, ಗಣೇಶನ ಪ್ರತಿಮೆಗಳನ್ನಿರಿಸಿ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿದ್ಯುತ್ ದೀಪಾಲಂಕಾರ, ಸೌಂಡ್‌ಸಿಸ್ಟಂ ಅಬ್ಬರ, ಪಟಾಕಿ ಸದ್ದು, ಕನ್ನಡ, ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕುವ ಯುವಕರು, ಕೇಕೆ, ಕೇಸರಿ ಧ್ವಜ, ಕನ್ನಡ ಬಾವುಟಗಳ ಹಾರಾಟ ಮೊದಲಾದವು ಕಣ್ಣಿಗೆ ಸುಗ್ಗಿ ನೀಡಿದವು.

ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ಎಲ್‌ಎಲ್‌ಸಿಯಲ್ಲಿ ವಿಸರ್ಜನೆ ಮಾಡಲಾಯಿತು.

ಸಾರಥಿಯಾದ ಶಾಸಕ ಆನಂದ್‌ಸಿಂಗ್:  ಹೊಸಪೇಟೆ ರಾಣಿಪೇಟೆಯ ‘ಆನಂದ ಗಣಪ’ ಮೂರ್ತಿ ವಿಸರ್ಜನಾ ಮೆರವಣಿಗೆ ವೈಭವದಿಂದ ನಡೆಯಿತು. ರಾಣಿಪೇಟೆಯಿಂದ ಆರಂಭಗೊಂಡ ಮೆರವಣಿಗೆ ಶಾನುಭಾಗ ಸರ್ಕಲ್, ಉದ್ಯೋಗ ಪೆಟ್ರೋಲ್ ಬಂಕ್, ಜುಮ್ಮಾ ಮಸೀದಿ ಸರ್ಕಲ್ ಮೂಲಕ ಸಾಗಿತು.

ಗಣೇಶ ಮೂರ್ತಿ ಹೊತ್ತ ಟ್ರಾೃಕ್ಟರ್‌ಗೆ ಸಾರಥಿಯಾಗಿದ್ದ ಶಾಸಕ ಆನಂದ್‌ಸಿಂಗ್ ಎಲ್ಲರ ಆಕರ್ಷಣೆಯಾಗಿದ್ದರು. ಕೇಸರಿ ಬಟ್ಟೆ ತೊಟ್ಟು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ‘ಗಣಪತಿ ಬಪ್ಪ ಮೋರಯಾ’ ಎಂದು ಕೂಗಿ ಗಮನ ಸೆಳೆದರು. ಯುವಕರು, ಅಭಿಮಾನಿಗಳು ಆನಂದ್‌ಸಿಂಗ್ ಜತೆ ಸೆಲ್ಫಿತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಮೆರವಣಿಗೆಯಲ್ಲಿ ಕೇರಳದ ಮಹಿಳೆಯರ ನೃತ್ಯ, ಮಹಾರಾಷ್ಟ್ರದ ಡೋಲು, ಮಲಪನಗುಡಿಯ ಡೊಳ್ಳು, ದಕ್ಷಿಣ ಕನ್ನಡದ ಮರಗಾಲು, ಹುಲಿವೇಷಧಾರಿ ಯುವಕರ ಕುಣಿತ ಕಣ್ಮನ ಸೆಳೆಯಿತು. ಶಾಸಕರ ಪುತ್ರ ಸಿದ್ಧಾರ್ಥ ಸಿಂಗ್, ಆಪ್ತರಾದ ಧರ್ಮೇಂದ್ರ ಸಿಂಗ್, ಸಂದೀಪ್‌ಸಿಂಗ್, ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ, ಸದಸ್ಯ ರೂಪೇಶ್‌ಕುಮಾರ್ ಇತರರು ಇದ್ದರು.

ಜುಮ್ಮಾ ಮಸೀದಿ ಸರ್ಕಲ್ ಮೂಲಕವೇ ಮೆರವಣಿಗೆ ಸಾಗಿದ್ದು, ಯುವಕರು ನೃತ್ಯ ಮಾಡಿದರು. ಯುವ ಪಡೆಯನ್ನು ವೃತ್ತದಿಂದ ಮುಂದೆ ಸಾಗ ಹಾಕಲು 30ಕ್ಕೂ ಅಧಿಕ ಪೊಲೀಸರು ಮಫ್ತಿಯಲ್ಲೇ ಯುವಕರಂತೆ ಪಾಲ್ಗೊಂಡಿದ್ದರು. ಜುಮ್ಮಾ ಮಸೀದಿ ಸೇರಿ ಇತರೆಡೆ ಸಿಸಿ ಕ್ಯಾಮರಾ ಕಣ್ಗಾವಲಿತ್ತು. ಎಸ್ಪಿ ಡಾ.ಅರುಣ್ ರಂಗರಾಜನ್, ಅಡಿಷನಲ್ ಎಸ್ಪಿ ಜಗದೀಶ್, ಎಸಿ ಲೋಕೇಶ್ ಪಿ.ಎನ್., ತಹಸೀಲ್ದಾರ್ ಎಚ್.ವಿಶ್ವನಾಥ, ಡಿವೈಎಸ್‌ಪಿ ಕೆ.ಶಿವಾರೆಡ್ಡಿ ಸೇರಿ ಸಿಪಿಐಗಳು, ಪಿಎಸ್‌ಐಗಳು ಮಸೀದಿ ಬಳಿ ರಾತ್ರಿ 1ಗಂಟೆವರೆಗೆ ಇದ್ದರು. ವಿಸರ್ಜನಾ ಸ್ಥಳದಲ್ಲಿ ಗೃಹರಕ್ಷಕ ದಳದ ಈಜು ಪಟುಗಳು, ಅಗ್ನಿಶಾಮಕ ಸಿಬ್ಬಂದಿ ಸೇರಿ 50ಕ್ಕೂ ಅಧಿಕ ಪೊಲೀಸರು ಇದ್ದರು.

Leave a Reply

Your email address will not be published. Required fields are marked *

Back To Top