More

    ಸಿ ಅಂಡ್ ಆರ್ ನಿಯಮ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ

    ಹೊಸಪೇಟೆ: ಸರ್ಕಾರ ಜಾರಿಗೆ ತಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಅಂಡ್ ಆರ್ ಕರಡು ನಿಯಮಗಳಿಂದ ಪ್ರಾಥಮಿಕ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರ ಕೂಡಲೇ ನಿಯಮ ಹಿಂಪಡೆದು ಪಿಎಸ್‌ಟಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಬಿಇಒ ಪಿ.ಸುನಂದಾಗೆ ಸೋಮವಾರ ಮನವಿ ಸಲ್ಲಿಸಿದರು.

    ತಾಲೂಕು ಘಟಕದ ಅಧ್ಯಕ್ಷ ಕೆ.ಮಾರಗದಪ್ಪ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 7ನೇ ತರಗತಿವರೆಗೆ ನಿಯುಕ್ತಿಗೊಂಡಿದ್ದು, ನಿವೃತ್ತಿಯಾಗುವವರೆಗೂ ಅದೇ ಹುದ್ದೆಯಲ್ಲಿ ಒಂದು ವೇತನ ಬಡ್ತಿ ನೀಡಿ ಮುಂದುವರಿಸಿ ಸೇವಾ ಜೇಷ್ಠತೆ ರಕ್ಷಿಸಬೇಕು. 2017ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ 1ರಿಂದ 8ನೇ ತರಗತಿಗೆ ಬೋಧಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪ್ರತ್ಯೇಕ ವೃಂದವನ್ನು ಸೃಜಿಸಿ, ಮೂಲವೇತನ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.

    2002ಕ್ಕಿಂತ ಪೂರ್ವದಲ್ಲಿ ನೇಮಕವಾದ ಪ್ರಾಥಮಿಕ ಶಿಕ್ಷಕರಿಗೆ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಪುನರ್ ಪದನಾಮೀಕರಿಸಬೇಕು. ಹಿಂದಿ ಶಿಕ್ಷಕರನ್ನು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಸೇರಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಜಿಪಿಟಿ ಅರ್ಹತೆ ಹೊಂದಿದ ಪಿಎಸ್‌ಟಿ ಶಿಕ್ಷಕರನ್ನು ವಿದ್ಯಾರ್ಹತೆಗನುಗುಣವಾಗಿ ಅದೇ ಶಾಲೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

    ತಾಲೂಕು ಘಟಕದ ಗೌರವಾಧ್ಯಕ್ಷ ಬಿ.ಕೆ.ಹೇಮರೆಡ್ಡಿ, ಉಪಾಧ್ಯಕ್ಷ ಬಸವರಾಜ.ಕೆ., ಜಿಲ್ಲಾ ಉಪಾಧ್ಯಕ್ಷ ಕುಬೇರಾಚಾರಿ, ಸಹಕಾರ್ಯದರ್ಶಿ ಎನ್.ಎಚ್.ಲಲಿತಮ್ಮ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts