More

    ಹಂಪಿಯಲ್ಲಿ ಶ್ರೀಪುರಂದರ ಆರಾಧನೋತ್ಸವ ನಾಳೆ, ಕನ್ನಡ, ಸಂಸ್ಕೃತಿ ಇಲಾಖೆ ಎಡಿ ಸಿದ್ದಲಿಂಗೇಶ ಹೇಳಿಕೆ

    ಕೀರ್ತನೆಗಳ ಗಾಯನ, ನೃತ್ಯ ರೂಪಕ ಪ್ರದರ್ಶನ

    ಹೊಸಪೇಟೆ: ಹಂಪಿಯ ಶ್ರೀ ಪುರಂದರ ಮಂಟಪದಲ್ಲಿ ಜ.24 ರಂದು ಶ್ರೀಪುರಂದರ ದಾಸರ ಆರಾಧನೋತ್ಸವ ಹಮ್ಮಿಕೊಂಡಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ ಹೇಳಿದರು.

    ಜ.24ರ ಬೆಳಗ್ಗೆ 8 ಕ್ಕೆ ಪುರಂದರ ಮಂಟಪದಲ್ಲಿ ವಿಶೇಷ ಪೂಜೆ ಹಾಗೂ ಸಂಜೆ 6ಕ್ಕೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಕಲಾವಿದರಿಂದ ಕೀರ್ತನೆಗಳ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಆರಾಧನೋತ್ಸವಕ್ಕೆ ಸರ್ಕಾರ 10 ಲಕ್ಷ ರೂ. ಬಿಡುಗಡೆ ಮಾಡಿದೆ. ಅದರಲ್ಲಿ 5.56 ಲಕ್ಷ ರೂ. ಕಲಾವಿದರ ಗೌರವ ಸಂಭಾವನೆಗೆ ಮೀಸಲಿಡಲಾಗಿದೆ. ಉಳಿದ ಹಣದಲ್ಲಿ ಇತರ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಜಿಲ್ಲೆ ಸೇರಿ ಬೆಂಗಳೂರು, ಚಿತ್ರದುರ್ಗ ಜಿಲ್ಲೆಯ ಕಲಾವಿದರು ಕೀರ್ತನೆ, ನೃತ್ಯರೂಪಕ ಪ್ರದರ್ಶಿಸಲಿದ್ದಾರೆ. ಶ್ರೀವ್ಯಾಸರಾಜಮಠದ ಉತ್ತರಾಧಿಕಾರಿ ಶ್ರೀ ವಿದ್ಯಾವಿಜಯ ತೀರ್ಥರು, ಹಂಪಿ ಶ್ರೀ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸುವರು ಎಂದು ಮಾಹಿತಿ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸುವರು. ಶಾಸಕ ಆನಂದಸಿಂಗ್ ಅಧ್ಯಕ್ಷತೆವಹಿಸುವರು. ಹಂಪಿ ಗ್ರಾಪಂ ಅಧ್ಯಕ್ಷೆ ಎಚ್.ಭೀಮವ್ವ, ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಡಾ.ಸಂಗನಬಸವ ಸ್ವಾಮೀಜಿ, ಗಾಯಿತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ, ಆನೆಗೊಂದಿ ರಾಜ ವಂಶಸ್ಥ ಶ್ರೀಕೃಷ್ಣದೇವರಾಯ ಉಪಸ್ಥಿತರಿರುವರು. ಸಹ ಪ್ರಾಧ್ಯಾಪಕ ಮಾನಕರಿ ಶ್ರೀನಿವಾಸ ಆಚಾರ್ಯ ಉಪನ್ಯಾಸ ನೀಡುವರು ಎಂದು ತಿಳಿಸಿದರು. ಪ್ರಭಾರ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ, ತಹಸೀಲ್ದಾರ್ ಎಚ್.ವಿಶ್ವನಾಥ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಬಿಇಒ ಎಲ್.ಡಿ.ಜೋಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts