Friday, 16th November 2018  

Vijayavani

Breaking News

ಹೊಸನಗರದಲ್ಲಿ ಮತ್ತೆ ಮಳೆ ಚುರುಕು

Friday, 06.07.2018, 10:06 PM       No Comments

ಹೊಸನಗರ: ಆರಂಭವಾದ ಮೊದಲ ದಿನದಿಂದಲೇ ಪುನರ್ವಸು ಮಳೆ ಚುರುಕಾಗಿದ್ದು ತಾಲೂಕಿನಲ್ಲಿ ಒಂದೇ ಸಮನೆ ಸುರಿಯುತ್ತಿದೆ.

ತಾಲೂಕಿನ ಕೆರೆಹಳ್ಳಿ ಹೋಬಳಿಯ ರಿಪ್ಪನ್​ಪೇಟೆ, ಹೆದ್ದಾರಿಪುರ, ಅರಸಾಳು ಮತ್ತಿತರೆಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುತ್ತಿದೆ. ನಗರ, ಹುಂಚಾ ಹೋಬಳಿಗಳಲ್ಲಿ ಮಳೆ ಜೋರಾಗಿಯೇ ಸುರಿಯುತ್ತಿದೆ. ನಗರ ಹೋಬಳಿಯ ಜಲಾನಯನ ಮತ್ತು ಘಟ್ಟ ಪ್ರದೇಶದಲ್ಲಿ ಮಳೆ ಧೋ ಎಂದು ಸುರಿಯುತ್ತಿದ್ದು ಇಲ್ಲಿನ ಜಲಾಶಯಗಳಿಗೆ ನೀರು ರಭಸದಿಂದ ಹರಿದು ಬರುತ್ತಿದೆ.

ತಾಲೂಕಿನ ಹುಲಿಕಲ್ ಮತ್ತು ಕೊಲ್ಲೂರು ಘಾಟಿ ಪ್ರದೇಶಗಳಲ್ಲಿ ಮಳೆಯಿಂದಾಗಿ ಮಂಜು ಮುಸುಕಿದ ವಾತಾವರಣವಿದೆ. ಇದರಿಂದ ಪ್ರಯಾಣಿಕರ ಓಡಾಟಕ್ಕೆ ತುಸು ತೊಂದರೆ ಆಗುತ್ತಿದೆ. ಮಳೆ ನೀರು ಹರಿದು ರಸ್ತೆಗಳ ಇಕ್ಕೆಲಗಳು ಕೊಚ್ಚಿ ಹೋಗಿದ್ದು ರಸ್ತೆ ಸಂಚಾರ ಕಷ್ಟಕರವಾಗಿದೆ. ಎಡಬಿಡದ ಮಳೆಯಿಂದಾಗಿ ಹೊಲ ಗದ್ದೆಗಳಲ್ಲಿ ನೀರು ಹರಿದಿದ್ದು ಭತ್ತದ ಸಸಿ ಮಡಿ ತಯಾರಿಕೆ ಮತ್ತು ಬಿತ್ತನೆ ನಾಟಿಗೆ ಮಳೆ ಸಹಾಯಕವಾಗಿದೆ.

Leave a Reply

Your email address will not be published. Required fields are marked *

Back To Top