ಸುಮಲತಾ ಗೆಲುವಿಗಾಗಿ ಅನ್ನ ದಾಸೋಹ

ಹೊಸದುರ್ಗ: ಸುಮಲತಾ ಅಂಬರೀಷ್ ಅವರ ವಿಜಯಕ್ಕೆ ಪಟ್ಟಣದಲ್ಲಿ ಯುವಕರು ಸಿಹಿ ಹಂಚಿ ಸಂಭ್ರಮಿಸಿದರು.

ಚುನಾವಣೆ ವೇಳೆ ಮಂಡ್ಯಕ್ಕೆ ತೆರಳಿ ಸುಮಲತಾ ಪರ ಪ್ರಚಾರ ನಡೆಸಿದ್ದ ಯುವಕರು, ಫಲಿತಾಂಶ ಪ್ರಕಟವಾಗುತ್ತಿದಂತೆ ಹಳೇ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಿದರು. ಸಂಜೆ ಅನ್ನದಾನ ಮಾಡಲಾಯಿತು.

ಪುರಸಭೆ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಪ್ರವೀಣ್, ಬಿಜೆಪಿ ಯುವ ಮುಖಂಡ ಫಕ್ರುದ್ದೀನ್, ರಾಘವೇಂದ್ರ, ಪ್ರದೀಪ್, ಸೆವ್ವಾಗ್ ರವಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *