23.2 C
Bangalore
Saturday, December 14, 2019

ಮತ್ತೆ ಕಲ್ಯಾಣಕ್ಕೆ ಇಂದು ಚಾಲನೆ

Latest News

ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ

ಯಾದಗಿರಿ: ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಯನ್ನು ಕೊಡಿಸುವುದು ಪೋಷಕರ ಕರ್ತವ್ಯ ಕೂಡ ಆಗಿದೆ ಎಂದು ಕಿರಿಯ...

ಹಿರಿಯ ವಕೀಲರನ್ನು ಗೌರವದಿಂದ ಕಾಣಿ

ಯಾದಗಿರಿ : ಕಿರಿಯ ವಕೀಲರು ಹಿರಿಯ ವಕೀಲರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ...

16 ಯುವಕರ ಮೇಲೆ ಪ್ರಕರಣ ದಾಖಲು

ಬಾದಾಮಿ: ದ್ವಿಚಕ್ರ ವಾಹನಕ್ಕೆ ಹಾದು ಹೋಗಲು ಅವಕಾಶ ನೀಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಆರಂಭವಾದ ಜಗಳ ಶನಿವಾರ ವಿಕೋಪಕ್ಕೆ...

ಮೆಟ್ರೋಗೆ ಹಾರಿ ಗಂಡ ಮೃತಪಟ್ಟ ಒಂದು ಗಂಟೆಯಲ್ಲೇ ಮನೆಯಲ್ಲಿ ನೇಣು ಬಿಗಿದುಕೊಂಡ ಹೆಂಡತಿ, ಮಗಳು!

ನವದೆಹಲಿ: ಗಂಡ ಮೆಟ್ರೋಗೆ ಹಾರಿ ಮೃತಪಟ್ಟ ಗಂಟೆಯೊಳಗೆ ಮನೆಯಲ್ಲಿ ಹೆಂಡತಿ ಮತ್ತು ಮಗಳು ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ದೆಹಲಿಯ ಜವಹರ ಲಾಲ್​ ನೆಹರು ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ...

ನಾಡು-ನುಡಿ ರಕ್ಷಣೆಗೆ ಸೇವಾ ಮನೋಭಾವ ಅಗತ್ಯ

ಜಗಳೂರು: ಜಗಳೂರಿನಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಆಯೋಜಿಸುವ ಚಿಂತನೆ ಇದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ ಎನ್‌ಎಂಕೆ ಪ್ರೌಢಶಾಲೆ ಸಭಾಂಗಣದಲ್ಲಿ...

ಹೊಸದುರ್ಗ: ಶಿವಶರಣರ ಸಮ ಸಮಾಜದ ಪರಿಕಲ್ಪನೆ ಸಾಕಾರಗೊಳಿಸುವ ಆಶಯದೊಂದಿಗೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹಮ್ಮಿಕೊಂಡಿರುವ ‘ಮತ್ತೆ ಕಲ್ಯಾಣ’ ಆಂದೋಲನ ಶರಣೆ ಅಕ್ಕನಾಗಲಾಂಬಿಕೆ ದೇವಿ ಐಕ್ಯ ಸ್ಥಳ ತರೀಕೆರೆಯಿಂದ ಗುರುವಾರ ಆರಂಭವಾಗಲಿದೆ.

ಅಕ್ಕನಾಗಲಾಂಬಿಕೆಯ ಐಕ್ಯ ಸ್ಥಳದಿಂದ ಆರಂಭವಾಗಲಿರುವ ಈ ಆಂದೋಲನ ಒಂದು ತಿಂಗಳ ಕಾಲ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚರಿಸಿ ಆ.30ರಂದು ಬಸವಣ್ಣನ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಸಮಾಪ್ತಿಗೊಳ್ಳಲಿದೆ.

ಶರಣರ ಆಶಯಗಳಿಗೆ ಆದ್ಯತೆ ನೀಡಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ದಿನ ಶರಣರ ವಿಚಾರಗಳ ಕುರಿತು ಸಂವಾದ, ಸಾಮರಸ್ಯ ನಡಿಗೆ, ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಅನುಭವಮಂಟಪವನ್ನು ಕೇಂದ್ರವಾಗಿಸಿಕೊಂಡು ಕಲ್ಯಾಣ ರಾಜ್ಯ ಕಟ್ಟಲು ಶರಣರು ನಡೆಸಿದ ಹೋರಾಟ ನೆನಪಿಸಿ ಆ ನಿಟ್ಟಿನಲ್ಲಿ ಸಾಗುವುದು ಈ ಆಂದೋಲನದ ಉದ್ದೇಶವಾಗಿದೆ.

ಕಾರ್ಯಕ್ರಮ ನಡೆಯುವ ನಗರದಲ್ಲಿ ಪ್ರತಿ ದಿನ ಬೆಳಗ್ಗೆ 11ಕ್ಕೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಶಿವಶರಣರ ವಿಚಾರಗಳ ಕುರಿತು ಸಂವಾದ ಆಯೋಜಿಸಲಾಗುತ್ತಿದೆ.

ಸಂಜೆ 5ಕ್ಕೆ ಜನರೊಂದಿಗೆ ಸಾಮರಸ್ಯದ ನಡಿಗೆ, 6 ಗಂಟೆಗೆ ಸಾರ್ವಜನಿಕ ಸಭೆ, ಆ ಬಳಿಕ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಶಾಲೆ ಕಲಾವಿದರಿಂದ ಪಂಡಿತಾರಾಧ್ಯ ಶ್ರೀಗಳು ರಚಿಸಿರುವ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಶರಣ ಚಿಂತನೆಯ ಸಮಾನ ಮನಸ್ಕರು ಸಾಣೇಹಳ್ಳಿ ಶ್ರೀ ನೇತೃತ್ವದಲ್ಲಿ ‘ಸಹಮತ ’ವೇದಿಕೆ ರಚಿಸಿಕೊಂಡು ಆ ಮೂಲಕ ‘ಮತ್ತೆ ಕಲ್ಯಾಣ’ ಹೆಸರಿನಲ್ಲಿ ಆಂದೋಲನ ರೂಪಿಸಿದ್ದಾರೆ.

20 ರೂಪಾಯಿಗೆ ಮತ್ತೆ ಕಲ್ಯಾಣ ಪುಸ್ತಕ
ಆಂದೋಲನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಜತೆಗೆ 100 ರೂ. ಮೌಲ್ಯದ ಮತ್ತೆ ಕಲ್ಯಾಣ ಪುಸ್ತಕವನ್ನು 20 ರೂ.ಗೆ ನೀಡಲಾಗುತ್ತಿದೆ. ಪಂಡಿತಾರಾಧ್ಯ ಶ್ರೀ ಸಂಪಾದಿಸಿರುವ ವಚನಕಾರರ ಬದುಕು ಮತ್ತು ಬರಹ ಒಳಗೊಂಡಿರುವ 108 ಪುಟಗಳ ಪುಸ್ತಕದಲ್ಲಿ ಎಸ್.ಜಿ.ಸಿದ್ದರಾಮಯ್ಯ, ಡಾ.ರಂಜಾನ್ ದರ್ಗಾ, ಡಾ.ಸಿದ್ದನಗೌಡ ಪಾಟೀಲ್, ಡಾ.ಲೋಕೇಶ್ ಅಗಸನಕಟ್ಟೆ, ಕವಿ ಚಂದ್ರಶೇಖರ್ ತಾಳ್ಯ ಮತ್ತಿತರರ ಬರಹಗಳಿವೆ. ಪುಸ್ತಕವನ್ನು ಯುವಪೀಳಿಗೆಗೆ ಹಂಚುವ ಮೂಲಕ ಶರಣರ ಚಿಂತನ-ಮಂಥನ-ಸಂವಾದ ನಡೆಸಲಾಗುತ್ತದೆ.

ಪ್ರಚಾರ ರಥ: ವಿನ್ಯಾಸಕಾರ ಶಶಿಧರ ಹಡಪ ವಿನ್ಯಾಸಗೊಳಿಸಿದ ಪ್ರಚಾರ ರಥವನ್ನು ಅಭಿಯಾನಕ್ಕೆ ಳಸಲಾಗುತ್ತಿದೆ. ಇದರ ಮುಂಭಾಗ ಕೈಯಲ್ಲಿ ಲಿಂಗ ಹಿಡಿದ ಬಸವಣ್ಣನ ಮೂರ್ತಿ ಹಾಗೂ ಕೂಡಲಸಂಗಮದ ಐಕ್ಯಮಂಟಪ ರೂಪಿಸಲಾಗಿದೆ. ಮೇಲ್ಭಾಗದಲ್ಲಿ ಕಾಯಕ ಬಿಂಬಿಸುವ ಶರಣರ ಪ್ರತಿಕೃತಿಗಳಿವೆ. ಹಿಂಭಾಗದಲ್ಲಿ ಅಲ್ಲಮಪ್ರಭು ಅನುಭವ ಮಂಟಪದಲ್ಲಿ ಕುಳಿತ ದೃಶ್ಯ ರೂಪಿಸಲಾಗಿದೆ. ಶರಣರ ವಚನಗಳ ಸಂಗೀತ ನಿರಂತರ ಕಿವಿ ತುಂಬಲಿದೆ.

ಹರಪನಹಳ್ಳಿ ತಾಲೂಕಿನಿಂದ 500 ಜನ: ಬಳ್ಳಾರಿಯಲ್ಲಿ ಆ.16ರಂದು ನಡೆಯುವ ಮತ್ತೆ ಕಲ್ಯಾಣ ಸಂವಾದ ಕಾರ್ಯಕ್ರಮಕ್ಕೆ ತಾಲೂಕಿನಿಂದ 500ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಸಾಧು ವೀರಶೈವ ಸಮಾಜದ ಅಧ್ಯಕ್ಷ ಬಂದೊಳ ಮಂಜುನಾಥ ತಿಳಿಸಿದ್ದಾರೆ.

ಪಟ್ಟಣದ ಎಸ್.ಟಿ.ಜೆ.ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಬುಧವಾರ ಸಮುದಾಯದಿಂದ ಆಯೋಜಿಸಿದ್ದ ಪೂರ್ವಸಿದ್ಧತೆ ಸಭೆ ಬಳಿಕ ಮಾತನಾಡಿ, ಪಾಲ್ಗೊಳ್ಳುವವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಮಾಜದ ಮುಖಂಡರಾದ ಜಿ.ನಂಜನಗೌಡ, ರೇವಣಗೌಡ, ರಾಜಶೇಖರಗೌಡ, ಬಸವರಾಜ ಕಮ್ಮಾರ್, ಪ್ರೇಮಕುಮಾರ, ದೇವರಾಜ್, ನಾಗರಾಜ್, ಯರ‌್ರಿಸ್ವಾಮಿ, ಕೆ.ಟಿ.ವೆಂಕಟೇಶ್, ರವೀಂದ್ರ ಇತರರಿದ್ದರು.

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...