ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹೊಸದುರ್ಗ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಬಾಳೆಗಿಡ, ತೆಂಗಿನಮರಗಳು ನೆಲಕಚ್ಚಿದ್ದು, ನಷ್ಟ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ.

ಶ್ರೀರಾಂಪುರ ಹೋಬಳಿಯಲ್ಲಿ 60.2, ಮತ್ತೋಡಿನಲ್ಲಿ 58, ಮಾಡದಕೆರೆಯಲ್ಲಿ 17 ಹಾಗೂ ಬಾಗೂರಿನಲ್ಲಿ 15.2 ಮಿ.ಮೀ. ಮಳೆಯಾಗಿದೆ. ಕಾನುಬೇನಹಳ್ಳಿ, ಬೊಮ್ಮೆನಹಳ್ಳಿ ಹಾಗೂ ಬಿಎಸ್‌ಕೆ ಕಾವಲಿನಲ್ಲಿ ಬಾಳೆ ಫಸಲು ನೆಲಕಚ್ಚಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ತೆಂಗಿನಮರಗಳು ಧರೆಗುರುಳಿವೆ.

ಭಾನುವಾರ ಸಂಜೆ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯಿತು. ಸಿಡಿಲು, ಗುಡುಗು, ಗಾಳಿಯ ಅಬ್ಬರ ಹೆಚ್ಚಾಗಿತ್ತು. ವಿವಿಧೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು ವರದಿಯಾಗಿದೆ.

Leave a Reply

Your email address will not be published. Required fields are marked *