ಹೊಸದುರ್ಗದಲ್ಲಿ ಸೋಮವಾರ ಶನೈಶ್ಚರ ಸ್ವಾಮಿ ದೇಗುಲ ಲೋಕಾರ್ಪಣೆ

ಹೊಸದುರ್ಗ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗ ನಿರ್ಮಿಸಿರುವ ಶ್ರೀ ಶನೈಶ್ಚರ ಸ್ವಾಮಿ ನೂತನ ದೇಗುಲ ಲೋಕಾರ್ಪಣೆ, ನೂತನ ಶಿಲಾ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಆ. 5 ರಿಂದ 7 ರವರೆಗೆ ನಡೆಯಲಿದೆ.

ಆ.5 ರಂದು ಸೋಮವಾರ ಮುಂಜಾನೆ ಶನೈಶ್ಚರ ಸ್ವಾಮಿ ದೇವಾಲಯದ ಪ್ರವೇಶೋತ್ಸವ, ಬೆಳಗ್ಗೆ 8 ಕ್ಕೆ ಸ್ವಸ್ತಿವಾಚನ, ಸಂಕಲ್ಪ, ಮಹಾಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಪಂಚಗವ್ಯ, ಕೌತುಕ ಬಂಧನ, ಅಂಕುರಾರ್ಪಣೆ, ಬಿಂಬಶುದ್ಧಿ, ಮಹಾಗಣಪತಿ ಹೋಮ, ವಾಸ್ತು ಹೋಮ, ಪೂರ್ಣಾಹುತಿ ನಡೆಯಲಿವೆ.

ಸಂಜೆ ಶನೈಶ್ಚರ ಸ್ವಾಮಿ ನೂತನ ವಿಗ್ರಹದ ಪುರಪ್ರವೇಶ ಹಾಗೂ ರಾಜಬೀದಿ ಉತ್ಸವವಿದೆ. 6 ರಂದು ಶನೈಶ್ಚರ ಸ್ವಾಮಿ, ನವಗ್ರಹ, ಗಣಪತಿ, ಪಾರ್ವತಿ ದೇವಿ ಹಾಗೂ ಈಶ್ವರಲಿಂಗ ಸೇರಿ ನೂತನ ಶಿಲಾ ವಿಗ್ರಹಗಳಿಗೆ ಅಗ್ನಿಯತ್ತಾರಣ, ಜಲಾಧಿವಾಸ, ಕ್ಷೀರಾಧಿವಾಸ, ಪ್ರತಿಷ್ಠಾಂಗ, ಪರ್ಯಾಯತ್ರಯ ಹೋಮ, ಧಾನ್ಯಾಧಿವಾಸ, ವಸ್ತ್ರಾಧಿವಾಸ, ಪುಪ್ಪಾಧಿವಾಸ, ರತ್ನಾಧಿವಾಸ ಹಾಗೂ ಪೂರ್ಣಾಹುತಿ ಕಾರ್ಯಗಳು ನೆರವೆರಲಿವೆ.

ಬೆಳಗ್ಗೆ 8ರಿಂದ 11ರವರೆಗೆ ಶನೈಶ್ಚರ ಸ್ವಾಮಿ ಸೇರಿ ಎಲ್ಲ ದೇವತೆಗಳ ನೂತನ ವಿಗ್ರಹಕ್ಕೆ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕ ನಡೆಸಲು ಭಕ್ತರಿಗೆ ಮುಕ್ತ ಅವಕಾಶವಿರುತ್ತದೆ. ಪ್ರತಿಷ್ಠಾಪನೆಯ ಪಾಣಿಪೀಠಕ್ಕೆ ಚಿನ್ನ, ಬೆಳ್ಳಿ ಹಾಗೂ ನವರತ್ನಗಳನ್ನು ಸಮರ್ಪಿಸಲು ಅವಕಾಶವಿದೆ.

ಆ.7ರಂದು ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶನೈಶ್ಚರ ಸ್ವಾಮಿ, ನವಗ್ರಹ, ಗಣಪತಿ, ಪಾರ್ವತಿ ದೇವಿ ಹಾಗೂ ಈಶ್ವರ ಲಿಂಗ ಸೇರಿ ನೂತನ ಶಿಲಾವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಅಷ್ಟಬಂಧ ಪ್ರತಿಷ್ಠೆ, ನೇತ್ರೋನ್ಮಿಲನ, ಪ್ರಾಣಪ್ರತಿಷ್ಠೆ, ಪೂಜಾಂಗ ಹೋಮ, ಪ್ರತಿಷ್ಠಾಂಗ ಹೋಮ, ರುದ್ರಹೋಮ ಹಾಗೂ ಪೂರ್ಣಾಹುತಿ ನೆರವೇರಲಿದೆ.

ಬೆಳಗ್ಗೆ 9ಕ್ಕೆ 108 ಕುಂಭಗಳ ಮೆರವಣಿಗೆ ನಂತರ ಹುಣಸಘಟ್ಟದ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಸ್ವಾಮೀಜಿ ಅವರಿಂದ ನೂತನ ದೇವಾಲಯಕ್ಕೆ ಕಳಸಾರೋಹಣ, ಕುಂಭಾಭಿಷೇಕ, ಮಹಾಪೂಜೆಯೊಂದಿಗೆ ದೇವಾಲಯದ ಲೋಕಾರ್ಪಣೆ ನೆರವೇರಲಿದೆ.

ದೇಗುಲ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡಿರುವ ಧಾರ್ಮಿಕ ಸಮಾರಂಭದಲ್ಲಿ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಅನಂದ ಗುರೂಜಿ, ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಈಶ್ವಾರಾನಂದಪುರಿ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಡಿ. ಸುಧಾಕರ್, ಶಾಸಕ ಬಿ.ಜಿ. ಗೋವಿಂದಪ್ಪ ಸೇರಿ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸುವರು.

21 ವರ್ಷಗಳ ನಂತರ ದೇಗುಲ ನಿರ್ಮಾಣ
ಎಪಿಎಂಸಿ ಮಾರುಕಟ್ಟೆ ಮುಂಭಾಗ ಸಣ್ಣದಾಗಿದ್ದ ಶನೈಶ್ಚರ ಸ್ವಾಮಿ ದೇವಾಲಯವನ್ನು ವಿಶಾಲವಾಗಿ ನಿರ್ಮಿಸಬೇಕು ಎನ್ನುವ ಉದ್ದೇಶದಿಂದ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಸಿ. ಪ್ರಕಾಶ್ ನೇತೃತ್ವದಲ್ಲಿ ಭಕ್ತ ಮಂಡಳಿ ರಚಿಸಿ 2003 ರ ಆ.7 ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 21 ವರ್ಷಗಳ ನಂತರ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2024 ರ ಆ.7ರಂದು ಲೋಕಾರ್ಪಣೆಯಾಗುತ್ತಿದೆ.

80 ಅಡಿ ಉದ್ದ, 100 ಅಡಿ ಅಗಲವಿರುವ ವಿಶಾಲ ಕಟ್ಟಡದ ನಡುವೆ ಕೇರಳ ಶೈಲಿಯಲ್ಲಿ ಗರ್ಭಗುಡಿ ನಿರ್ಮಿಸಲಾಗಿದೆ. ಸುತ್ತಲೂ ಕಟಾಂಜನ ನಿರ್ಮಾಣವಾಗಿದೆ. 2 ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚವಾಗಿದೆ.

ಹೊಸದುರ್ಗ ಪಟ್ಟಣದ ಜನರ ಕಲ್ಯಾಣಕ್ಕಾಗಿ ಬೃಹತ್ ಶನೈಶ್ಚರ ಸ್ವಾಮಿ ದೇಗುಲ ನಿರ್ಮಿಸಲಾಗಿದೆ. ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಈ ಕಾರ್ಯ ಸಾಕಾರಗೊಂಡಿದೆ. ಲೋಕಾರ್ಪಣೆ ಕಾರ್ಯ ಪಟ್ಟಣದಲ್ಲಿ ಹಬ್ಬದ ಸಂಭ್ರಮ ಸೃಷ್ಟಿಸಲಿದೆ. ಪೂಜೆ, ಧಾರ್ಮಿಕ ಸಮಾರಂಭದ ಜತೆಗೆ ಮೂರು ದಿನಗಳ ಕಾಲ ನಿರಂತರ ಅನ್ನ ದಾಸೋಹ ನಡೆಯಲಿದೆ.
– ಸಿ.ಪ್ರಕಾಶ್, ಅಧ್ಯಕ್ಷರು, ಶನೈಶ್ಚರ ಸ್ವಾಮಿ ಭಕ್ತಮಂಡಳಿ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…