ವಿದ್ಯುತ್ ಅವಘಡ, ಕೃಷಿಕ ಸಾವು

ಹೊಸದುರ್ಗ: ಅಕಸ್ಮಿಕವಾಗಿ ವಿದ್ಯುತ್ ತಗುಲಿದ್ದ ತಂತಿಬೇಲಿ ದಾಟುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಶಾಕ್‌ನಿಂದ ಶನಿವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲೂಕಿನ ಮಾಡದಕೆರೆ ಹೋಬಳಿ ಅತ್ತಿಮಗ್ಗೆ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಗ್ರಾಮದ ಕೃಷಿಕ ಸಂಜೀವಪ್ಪ (55) ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಜಮೀನಿಗೆ ತೆರಳಿದ್ದ ಸಂಜೀವಪ್ಪ, ಪಕ್ಕದ ತೋಟದ ತಂತಿ ಬೇಲಿ ದಾಟಲು ವೇಳೆ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಹೊಸದುರ್ಗ ಪಿಎಸ್‌ಐ ಶಿವನಂಜಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *