ನವರಾತ್ರಿ ಸಂಭ್ರಮ; ಹೊಸದುರ್ಗದಲ್ಲಿ ಗಮನ ಸೆಳೆದ ದುರ್ಗಾ ಪರಮೇಶ್ವರಿ ಪರಿಷ್ಠಾಪನೆ ಕಾರ್ಯ

hosadurga, Navratri, Festival,

ಹೊಸದುರ್ಗ: ಶರನ್ನವರಾತ್ರಿ ಅಂಗವಾಗಿ ಇಲ್ಲಿನ ವಿನಾಯಕ ರಂಗಮಂದಿರದ ಆವರಣದಲ್ಲಿರುವ ದುರ್ಗಾದೇವಿ ಮಂಟಪದಲ್ಲಿ ಶನಿವಾರ ಶ್ರೀ ದುರ್ಗಾ ಪರಮೇಶ್ವರಿ ದೇವಿ ಪ್ರತಿಷ್ಠಾಪನೆ ಮಹೋತ್ಸವ ನೆರವೇರಿತು.

blank

ವೇದಬ್ರಹ್ಮ ಎಂ.ವಿ.ಕೃಷ್ಣಮೂರ್ತಿ ಘನಪಾಠಿ ಅವರ ನೇತೃತ್ವದಲ್ಲಿ ಪೂಜೆ ಕಾರ್ಯಗಳು ನೆರವೇರಿದವು. ಪುಣ್ಯಾಹ, ಸ್ವಸ್ತಿ ವಾಚನ, ಗಣಪತಿ ಪೂಜೆ, ಪ್ರಾಣ ಪ್ರತಿಷ್ಠಾಪನೆ, ಬಿಂಬ ಆಕರ್ಷಣಾ, ದೃಷ್ಟಿ, ಪಾರಾಯಣ, ಅಷ್ಟೋತ್ತರ, ಮಹಾಮಂಗಳಾರತಿ ನಡೆದವು.
ದುರ್ಗಾ ಸೇವಾ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸವಕ್ಕೆ ಸಾಕ್ಷಿಯಾದರು. ಮಹಿಳಾ ಮಂಡಳಿಯ ಸದಸ್ಯರು ಲಲಿತ ಸಹಸ್ರನಾಮ ಪಠಿಸಿದರು. ಕರೊನಾ ಕಾರಣ ಸರಳ ಆಚರಣೆ ಕೈಗೊಳ್ಳಲಾಗಿತ್ತು. ಆದರೆ ಮಂಟಪದ ಅಲಂಕಾರಕ್ಕೆ ಯಾವುದೇ ಕೊರತೆಯಾಗಿಲ್ಲ.

blank

ದೇವಿಯ ವಿಶೇಷ
ದುರ್ಗಾದೇವಿ ಮಂಟಪದಲ್ಲಿ ಸುಮಾರು ಎಂಟು ಅಡಿ ಎತ್ತರದ ಸಿಂಹಾಸನಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಹೊನ್ನಾವರದ ಕಕ್ಕೇರು ಗ್ರಾಮದ ಶಿಲ್ಪಿ ಜಿ.ಡಿ.ಭಟ್ ಅವರು ನಿರ್ಮಿಸಿರುವ ಮೂರ್ತಿಯು ಹತ್ತು ಭುಜಗಳನ್ನು ಹೊಂದಿದ್ದು, ಪ್ರತಿ ಕೈಯಲ್ಲೂ ವಿವಿಧ ಆಯುಧಗಳಿವೆ.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…