More

    ಪೌತಿಖಾತೆ ಆಂದೋಲನದಿಂದ ಅನುಕೂಲ

    ಹೊಸದುರ್ಗ: ಖಾತೆ ರಹಿತರಿಗೆ ಸರ್ಕಾರಿ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಉದ್ದೇಶದಿಂದ ಪೌತಿಖಾತೆ ಆಂದೋಲನ ನಡೆಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

    ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪೌತಿಖಾತೆ ಆಂದೋಲನ ಹಾಗೂ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.

    ರಾಜಕೀಯಕ್ಕಾಗಿ ಪೌತಿಖಾತೆ ಆಂದೋಲನ ನಡೆಸುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಜಮೀನು ಹೊಂದಿದ್ದು ಹಿರಿಯರ ಮರಣ ಪ್ರಮಾಣ ಪತ್ರವಿಲ್ಲದೆ ಖಾತೆ ಬದಲಾವಣೆ ಮಾಡಿಸಲಾಗದೆ ಪರದಾಡುತ್ತಿರುವವರಿಗೆ ಅನುಕೂಲವಾಗಲಿದೆ ಎಂದರು.

    ಗುಡ್ಡದ ನೆರಲಕೆರೆ ಗ್ರಾಪಂ ವ್ಯಾಪ್ತಿ 126 ಜನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಆಂದೋಲನದ ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಜನಪರ ಕೆಲಸ ಮಾಡುವಾಗ ಅಡೆತಡೆಗಳು ಸಾಮಾನ್ಯವಾಗಿರುತ್ತವೆ ಎಂದು ಹೇಳಿದರು.

    ಬಿಜೆಪಿ ತಾಲೂಕು ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ತಾಲೂಕಿನಲ್ಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪೌತಿಖಾತೆ ಆಂದೋಲನ ನಡೆಸುವ ಮೂಲಕ ಮಾದರಿಯಾಗಿದ್ದಾರೆ. ರಾಜ್ಯ ಸರ್ಕಾರ ಕೂಡ ಕಾರ್ಯಕ್ರಮವನ್ನು ರಾಜ್ಯವ್ಯಾಪ್ತಿ ವಿಸ್ತರಿಸಲು ಚಿಂತಿಸುತ್ತಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಅನಸೂಯಾ ಜಗನ್ನಾಥ್, ಜಿಪಂ ಸದಸ್ಯೆ ಚೇತನಾ ಪ್ರಸಾದ್, ಸದಸ್ಯರಾದ ಕರಿಬಸಪ್ಪ, ರಂಗಸ್ವಾಮಿ, ರವಿಕುಮಾರ್, ನಾಗರಾಜ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts