More

    ಹೊಸದುರ್ಗದಲ್ಲಿ ಬೋನಿಗೆ ಬಿದ್ದ ಚಿರತೆ; ಮುಂದುವರಿದ ಕಾರ್ಯಾಚರಣೆ

    ಹೊಸದುರ್ಗ: ಇಲ್ಲಿನ ಕುಂಚಿಟಿಗ ಸಂಸ್ಥಾನಮಠದ ಬಳಿಯ ರಾಗಿ ಶಿವಲಿಂಗಪ್ಪ ಎಂಬುವವರ ದಾಳಿಂಬೆ ತೋಟದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಮಂಗಳವಾರ ಬೆಳಗ್ಗೆ ಚಿರತೆ ಸೆರೆಯಾಗಿದೆ.
    ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮನೆಯಲ್ಲಿ ಕಟ್ಟಿದ ಹಸುವಿನ ಮೇಲೆ ದಾಳಿ ನಡೆಸಿ ಭಾಗಶಃ ತಿಂದು ಹಾಕಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಕುರಿ ಕಟ್ಟಿ ಬೋನು ಅಳವಡಿಸಿದ್ದರು. ಮತ್ತೊಂದು ಚಿರತೆಯಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
    ಕಳೆದ ವರ್ಷ ಕೂಡ ಡಾಲರ್ಸ್ ಕಾಲನಿಗೆ ಹೊಂದಿಕೊಂಡಿರುವ ವಿದ್ಯಾನಗರ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಪಟ್ಟಣದ ಜನರ ಆತಂಕ ಕಾರಣವಾಗಿತ್ತು.

    ಶಿವಲಿಂಗಪ್ಪ ಅವರ ತೋಟದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಒಂದು ಚಿರತೆ ಹಿಡಿದಿದ್ದು, ಇನ್ನೊಂದನ್ನು ಹಿಡಿಯುವತನಕ ಕಾರ್ಯಾಚರಣೆ ಮುಂದುವರಿಯಲಿದೆ.
    -ರಾಘವೇಂದ್ರ, ಅರಣ್ಯ ಇಲಾಖೆ ಅಧಿಕಾರಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts