ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ಹೊಸದುರ್ಗ: ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಶ್ರೀ ಕರಿಯಮ್ಮದೇವಿ ಮಹಾರಥೋತ್ಸವ ಮಂಗಳವಾರ ವೈಭವದಿಂದ ಜರುಗಿತು.

ಜಾತ್ರೆ ಅಂಗವಾಗಿ ಕರಿಯಮ್ಮದೇವಿ ದೇವಾಲಯದಲ್ಲಿ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ, ಧ್ವಜಾರೋಹಣ, ದೊಡ್ಡಬಾನ ಸೇವೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆದವು.

ಸೋಮವಾರ ಶ್ರೀ ಕಂಚಿವರದರಾಜಸ್ವಾಮಿ ಪುರಪ್ರವೇಶ ನೆರವೇರಿತು. ಮಂಗಳವಾರ ಬೆಳಿಗ್ಗೆ ಕರಿಯಮ್ಮದೇವಿ ಹಾಗೂ ಕಂಚಿವರದರಾಜಸ್ವಾಮಿ ಭೇಟಿ ಬಳಿಕ ಮೆರವಣಿಗೆ ಮೂಲಕ ಕರೆತಂದು ರಥಾರೋಹಣ ಮಾಡಲಾಯಿತು.

ಭಕ್ತಸಾಗರದ ಜಯಘೋಷಗಳ ಮಧ್ಯೆ ಮಹಾರಥೋತ್ಸವ ನಡೆಯಿತು.ಭಕ್ತರು ಬಾಳೆಹಣ್ಣು ತೂರುವ ಮೂಲಕ ಭಕ್ತಿ ಸಮರ್ಪಿಸಿದರು. ಇದಾದ ಬಳಿಕ ಅಮ್ಮನವರ ಸಿಡಿ ಉತ್ಸವ ನೆರವೇರಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *