ಸೀತಾರಾಘವ ಬ್ಯಾಂಕ್ ನೂತನ ಶಾಖೆ

ಹೊಸದುರ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕ್‌ನ ಭದ್ರಾವತಿ ಶಾಖೆಯ ಆಡಳಿತ ಕಚೇರಿ ಮೇ 31ರಂದು ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಎದುರು ನಿರ್ಮಿಸಿರುವ ಸುಸಜ್ಜಿತ ಬ್ಯಾಂಕ್ ಕಟ್ಟಡಕ್ಕೆ ಸಾಯಿಜ್ಯೋತಿ ಎಂಬ ಹೆಸರಿಡಲಾಗಿದೆ. ಹೊಸದುರ್ಗದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕ್, ಬೆಂಗಳೂರು, ಕಡೂರು, ಭದ್ರಾವತಿಯಲ್ಲೂ ಶಾಖೆೆಗಳನ್ನು ಒಳಗೊಂಡಿದೆ.

ಅಂದು ಬೆಳಗ್ಗೆ ಬ್ಯಾಂಕ್ ಕಟ್ಟಡ ಹಾಗೂ ಎಟಿಎಂ ಯಂತ್ರವನ್ನು ಭದ್ರಾವತಿಯ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ಹಂಜಿ ಶಿವಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಡಿ.ಆದಿರಾಜಯ್ಯ, ಪ್ರಧಾನ ವ್ಯವಸ್ಥಾಪಕ ಎನ್.ಮಂಜುನಾಥ್ ಹಾಗೂ ನಿರ್ದೇಶಕ ಮಂಡಳಿ ನಿರ್ದೇಶಕರು ಉಪಸ್ಥಿತರಿರುತ್ತಾರೆ.

ನೂತನ ಶಾಖೆಯು ಕೋರ್ ಬ್ಯಾಂಕಿಂಗ್, ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಸೇಫ್ ಲಾಕರ್, ಇ-ಸ್ಟಾೃಂಪಿಂಗ್, ವಿಮೆ ಸೌಲಭ್ಯ (ಸದಸ್ಯರಿಗೆ) ಹಾಗೂ ಅತ್ಯಾಕರ್ಷಕ ಬಡ್ಡಿದರದ ಠೇವಣಿ ಮತ್ತಿತರ ಸೌಲಭ್ಯ ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್, ಗ್ರಾಹಕರು ಹಾಗೂ ಸದಸ್ಯರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಸೇವೆ ಪರಿಗಣಿಸಿ ಸರ್ಕಾರ ಉತ್ತಮ ಸಹಕಾರ ಬ್ಯಾಂಕ್ ಪ್ರಶಸ್ತಿ ನೀಡಿದೆ. ನಾಲ್ಕೂ ಶಾಖೆಗಳು ಸ್ವಂತ ಕಟ್ಟಡ ಹೊಂದಿದ್ದು, ಹವಾನಿಯಂತ್ರಿತ ಹಾಗೂ ಸಂಗೀತಮಯ ವಾತಾವರಣ ಗ್ರಾಹಕರ ಮೆಚ್ಚುಗೆ ಗಳಿಸಿದೆ ಎಂದು ಸೀತಾರಾಘವ ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ತಿಳಿಸಿದ್ದಾರೆ.