ಕುಂಚಿಟಿಗ ಶ್ರೀ ಪಟ್ಟಾಧಿಕಾರ ಮಹೋತ್ಸವ

ಹೊಸದುರ್ಗ: ಹೊಳಲ್ಕೆರೆಯಲ್ಲಿ ಜು.22ರಂದು ಶ್ರೀ ಶಾಂತವೀರ ಸ್ವಾಮೀಜಿ ಅವರ 22ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜಪ್ಪ ತಿಳಿಸಿದರು.

ಪಟ್ಟಣದ ಕುಂಚಿಟಿಗ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀಗಳಿಗೆ ಆಮಂತ್ರಣ ನೀಡಿ ಮಾತನಾಡಿ, ದೇಶ ಹಾಗೂ ರಾಜ್ಯದ ವಿವಿಧೆಡೆ ನೆಲೆಸಿದ ಕುಂಚಿಟಿಗ ಸಮುದಾಯ ಒಗ್ಗೂಡಿಸಲು ಶ್ರೀಗಳು ಶ್ರಮಿಸುತ್ತಿದ್ದಾರೆ. 13 ಲಕ್ಷ ಕಿ.ಮೀ. ಸಂಚರಿಸಿ ಸಮಾಜ ಸಂಘಟಿಸುವ ಯತ್ನ ಮಾಡಿದ್ದಾರೆ. ಗೌರವಿಸುವ ಉದ್ದೇಶದಿಂದ ಶ್ರೀಗಳ 22ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದರು.

ಸಂಘದ ಕಾರ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, 22 ವರ್ಷಗಳಿಂದ ವಿಜಯರಾಯ ಸಂಗಮೇಶ್ವರ ಜಯಂತ್ಯುತ್ಸವದ ಮೂಲಕ ಸಮಾಜ ಸಂಘಟಿಸಿದ್ದಾರೆ ಎಂದು ತಿಳಿಸಿದರು.

ಕೃಷಿಯಿಂದ ಬಂದ ಆದಾಯವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆಯಲ್ಲಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಸ್ಥಾಪಿಸುವ ಚಿಂತನೆ ಇದೆ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಸಂತೋಷ್, ಪಡಿಘತ್ತೆ ಜಗದೀಶ್, ಈಶ್ವರ್ ದಗ್ಗೆ, ವೆಂಕಟೇಶ್, ಚಂದ್ರಶೇಖರ್, ಜಯಪ್ರಕಾಶ್ ಇತರರಿದ್ದರು.

Leave a Reply

Your email address will not be published. Required fields are marked *