ಹೊಸದುರ್ಗ: ತಾಲೂಕಿನ ಮಧುರೆ ಗ್ರಾಮದ ಬಳಿ ಆರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಹೊಸದುರ್ಗ ಠಾಣೆ ಪೋಲಿಸರು ಯಶ್ವಸಿಯಾಗಿದ್ದು, ನಾಲ್ವರು ಅರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಜುಲೈ 31ರಂದು ಮಧುರೆ ಹಾಗೂ ಬ್ರಹ್ಮ ವಿದ್ಯಾನಗರ ಮಧ್ಯೆ ಕಣಿವೆ ಸಂಗೇನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವದ ಮೇಲಿದ್ದ ಬಟ್ಟೆ ಮತ್ತಿತರ ಚಹರೆಗಳಿಂದ ಮೃತ ವ್ಯಕ್ತಿಯು ಚಿತ್ರದುರ್ಗ ತಾಲೂಕು, ಭೀಮಸಮುದ್ರ ಗ್ರಾಮದ ತಿಮ್ಮಪ್ಪ ಎಂದು ಗುರುತಿಸಲಾಗಿತ್ತು.
ಶವದ ಮರಣೋತ್ತರ ಪರಿಕ್ಷೇಯಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವು ಸಂಭವಿಸಿದೆ ಎನ್ನುವ ವರದಿ ಬಂದಿತ್ತು. ಅರಣ್ಯ ಇಲಾಖೆಯ ರಕ್ಷಕ ಎಂ.ರಾಘವೇಂದ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಹೊಸದುರ್ಗ ವೃತ್ತಕ್ಕೆ ವರ್ಗಾವಣೆಯಾಗಿ ಬಂದ ಸಿಪಿಐ ಪೈಜುಲ್ಲ ಹಾಗೂ ಪಿಎಸ್‌ಐ ಶಿವಕುಮಾರ್ ಪ್ರಕರಣದ ಕುರಿತು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಅರೋಪಿಗಳಾದ ಹೊಳಲ್ಕೆರೆ ತಾಲೂಕು ನಾರಾಯಣಗೊಂಡನಹಳ್ಳಿ ಗ್ರಾಮದ ಅಜಯಕುಮಾರ್, ನಾಗರಾಜು, ಕಿರಣಕುಮಾರ, ನಾಗರಾಜ ಬಂಧಿತರು.
ಕೊಲೆಗೆ ಬಳಸಲಾಗಿದ್ದ ಅಯುಧಗಳು, ಬೈಕ್‌ಗಳು ಹಾಗೂ ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದ್ದು, ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.