ಸಾಯಿಬಾಬಾ ಮಂದಿರದಲ್ಲಿ ಭಕ್ತಗಣ

ಹೊಸದುರ್ಗ: ಶಿರಡಿ ಸಾಯಿಬಾಬಾ ಕ್ಷೇತ್ರದ ಪ್ರತಿರೂಪವಾಗಿರುವ ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮಂಗಳವಾರ ಗುರುಪೌರ್ಣಿಮೆ ಉತ್ಸವ ವಿಜೃಂಭಣೆಯಿಂದ ಜರುಗಿತು.

ಮಂದಿರದಲ್ಲಿ ಬೆಳಗ್ಗೆಯಿಂದ ಕಾಕಡಾರತಿ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಬಾಬಾ ಮೂರ್ತಿಗೆ ಪಂಚಾಮೃತ ಅಭಿಷೇಕ, ಆರತಿ ನೆರವೇರಿಸಲಾಯಿತು. ಭಕ್ತರು ಸರತಿ ಸಾಲಲ್ಲಿ ನಿಂತು ಕ್ಷೀರಾಭಿಷೇಕ ನಡೆಸಿ ಧನ್ಯತೆ ಅನುಭವಿಸಿದರು.

ಮಹಾಮಂಗಳಾರತಿ ನಂತರ ಭಕ್ತರು ಬಾಬಾ ಮೂರ್ತಿ ಪಾದಸ್ಪರ್ಶ ಮಾಡಿದರು. ಮಂದಿರದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ಧೂಪದಾರಾತಿ ಇತ್ತು. ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿಯಿಂದ ಭಜನೆ, ಜನರಲ್ ಕಾರಿಯಪ್ಪ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಮಂದಿರ, ಸಂಪೂರ್ಣ ಸಮುಚ್ಚಯ ಹಾಗೂ ದ್ವಾರಕಾಮಯಿ ಅವರಣ ವಿದ್ಯುತ್ ದೀಪ, ತಳಿರು, ತೋರಣಗಳಿಂದ ಕಂಗೊಳಿಸುತ್ತಿತ್ತು. ಮಂದಿರದ ವಿಶ್ವಸ್ಥ ಮಂಡಲಿ ಅಧ್ಯಕ್ಷ ಹಂಜಿ ಶಿವಸ್ವಾಮಿ, ಪದಾಧಿಕಾರಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *