More

    6ರಂದು ಬಾಗೂರಲ್ಲಿ ಏಕಾದಶಿ

    ಹೊಸದುರ್ಗ: ತಾಲೂಕಿನ ಸಣ್ಣಕ್ಕಿ ಬಾಗೂರು ಗ್ರಾಮದ ಶ್ರೀ ಪ್ರಸನ್ನ ಚನ್ನಕೇಶವಸ್ವಾಮಿ ದೇಗುಲದಲ್ಲಿ ಜ.6ರಂದು ವೈಕುಂಠ ಏಕಾದಶಿ ಮಹೋತ್ಸವ ನೆರವೇರಲಿದೆ.

    ಅಂದು ಮುಂಜಾನೆ 5 ಗಂಟೆಯಿಂದ ಪೂಜೆ ಕಾರ್ಯಕ್ರಮ ಆರಂಭಗೊಳ್ಳಲಿವೆ. ಸುಪ್ರಭಾತ ಸೇವೆ, ಮಹಾಭಿಷೇಕ, ತೋಮಾಲೆ ಸೇವೆ, ಅಲಂಕಾರ ಪೂಜೆ, ವಿಷ್ಣುಸಹಸ್ರನಾಮ, ಪಾರಾಯಣ, ವೇದ ಪಾರಾಯಣ, ಅರ್ಚನೆ , ಮಹಾಮಂಗಳಾರತಿ ನೆರವೇರಲಿವೆ. ಉತ್ತರ ದಿಕ್ಕಿಗೆ ಸ್ಥಾಪಿಸಿರುವ ಗುರುಡಾರೂಢ ಮಹಾಲಕ್ಷ್ಮೀ ಸಮೇತ ವಿಷ್ಣುವಿನ ಉತ್ಸವ ಮೂರ್ತಿಯನ್ನು ವೈಕುಂಠ ದ್ವಾರದ ಮೂಲಕ ಭಕ್ತಾದಿಗಳು ದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

    ಚನ್ನಕೇಶವ ದೇವಾಲಯದ 11 ಮಹಾದ್ವಾರಗಳ ಮೂಲಕ ಚನ್ನಕೇಶವ ಸ್ವಾಮಿಯ ಮೂಲ ಮೂರ್ತಿಯನ್ನು ಸಂದರ್ಶಿಸಿ ನಂತರ ಕೊನೆಯ ಉತ್ತರದ್ವಾರದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ವಾಮಿಯ ಭೂ ವೈಕುಂಟ ಸೇವಾ ದರ್ಶನಕ್ಕೆ ಅವಕಾಶ ಮಾಡಲಾಗಿದೆ.

    ಉತ್ಸವಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಪೂರ್ವಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಪ್ರಧಾನ ಅರ್ಚಕ ಬಿ.ಕೆ.ಶ್ರೀನಿವಾಸನ್ ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದಾರೆ.

    ಅಂದಾಜು 800 ವರ್ಷಗಳ ಇತಿಹಾಸ ಹೊಂದಿರುವ ಪ್ರಸನ್ನ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಚೆನ್ನಕೇಶವಸ್ವಾಮಿ, ಮಹಾಲಕ್ಷ್ಮಿ ಅಮ್ಮನವರು ಹಾಗೂ ವೈಕುಂಠ ನಾರಾಯಣಸ್ವಾಮಿಯ ಮೂರ್ತಿ ಸ್ಥಾಪಿಸಲಾಗಿದೆ.

    ವೈಕುಂಠ ನಾರಾಯಣಸ್ವಾಮಿ: ವಿವಿಧ ಅವತಾರಗಳಲ್ಲಿ ಪೂಜೆಗೊಳ್ಳುತ್ತಿರುವ ವಿಷ್ಣುವಿನ ದೇವಾಲಯಗಳಲ್ಲಿ ಉತ್ತರ ದಿಕ್ಕಿನ ಬಾಗಿಲ ಮೇಲೆ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ದರ್ಶನ ಪಡೆಯುವ ಪದ್ಧತಿಯಿದೆ. ಆದರೆ, ಬಾಗೂರಿನ ಚನ್ನಕೇಶವ ದೇವಾಲಯದಲ್ಲಿ ದೇವರ ಮೂರ್ತಿಯನ್ನು ಉತ್ತರ ದಿಕ್ಕಿಗೆ ಬಾಗಿಲು ಹೊಂದಿರುವ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts