ಸರ್ಕಾರದಿಂದ ರೈತರಿಗೆ 30 ಸಾವಿರ ಕೋಟಿ ರೂ. ಸಾಲ

ಬಾಗಲಕೋಟೆ:ರಾಜ್ಯದ ರೈತರಿಗೆ ಸರ್ಕಾರದಿಂದಲೇ ಸಹಕಾರಿ ಬ್ಯಾಂಕ್​ಗಳ ಮೂಲಕ ಬಡ್ಡಿ ರಹಿತವಾಗಿ ವಾರ್ಷಿಕ 25 ರಿಂದ 30 ಸಾವಿರ ಕೋಟಿ ರೂ. ಸಾಲ ಒದಗಿಸುವ ಬಗ್ಗೆ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಬಾಗಲಕೋಟೆ ತೋಟಗಾರಿಕೆ ವಿವಿ ಆಚರಣೆಯಲ್ಲಿ ಸೋಮವಾರ ತೋಟಗಾರಿಕೆ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಾಲಕ್ಕಾಗಿ ರೈತರು ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಹೋಗುವುದನ್ನು ತಪ್ಪಿಸಲು ಚಿಂತನೆ ನಡೆಸಿದ್ದೇನೆ. ಸದ್ಯ ರಾಜ್ಯದಲ್ಲಿ 23 ಲಕ್ಷ ರೈತರು ಸಹಕಾರಿ ಬ್ಯಾಂಕ್​ಗಳಿಂದ 11 ಸಾವಿರ ಸಾವಿರ ಕೋಟಿ ರೂ. ಸಾಲ ಪಡೆಯುತ್ತಿದ್ದಾರೆ. ಇದನ್ನು 45 ರಿಂದ 50 ಲಕ್ಷ ರೈತ ಕುಟುಂಬಗಳಿಗೆ ವಿಸ್ತರಿಸುವ ಯೋಚನೆ ಇದೆ ಎಂದರು.

ಸರ್ಕಾರದಿಂದಲೇ ಬೆಳೆ ಖರೀದಿಗೂ ಚಿಂತನೆ: ಸದ್ಯ ಪ್ರತಿ ವರ್ಷ ಕೇಂದ್ರ ಸರ್ಕಾರ ಹೇಳಿದಷ್ಟು ಮಾತ್ರ ಬೆಳೆ ಖರೀದಿ ಮಾಡಬೇಕಿದೆ. ಅದೂ ಸಹ ಸರಿಯಾಗಿ ಜಾರಿಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಪ್ರತಿ ವರ್ಷ ರೈತರು ಬೆಳೆಯá-ವ ಎಲ್ಲ ಬೆಳೆಗಳ ಪ್ರಮಾಣದ ಮೌಲ್ಯ 28 ರಿಂದ 29 ಸಾವಿರ ಕೋಟಿ ರೂ. ಆಗá-ತ್ತಿದೆ. ಇದನ್ನು ಮಾರುಕಟ್ಟೆಗೆ ತೆಗೆದá-ಕೊಂಡು ಹೋದಾಗ ಮಧ್ಯರ್ವಗಳು ಅದನ್ನು ಖರೀದಿಸಿ, ಗ್ರಾಹಕರಿಗೆ ತಲá-ಪಿಸಿದಾಗ ಆ ಮೌಲ್ಯ 54 ಸಾವಿರ ಕೋಟಿ ರೂ. ಆಗá-ತ್ತಿದೆ. ಯಾವುದೇ ಕಷ್ಟಪಡದೆ ಏರ್ ಕಂಡಿಷನ್ ರೂಮ್ಲ್ಲಿ ಕುಳಿತು ವ್ಯವಹರಿಸá-ವ ಮಧ್ಯರ್ವಗಳಿಗೆ ವಾರ್ಷಿಕ 15 ಸಾವಿರ ಕೋಟಿ ರೂ. ಹೋಗá-ತ್ತಿದೆ. ಈ ಹಿನ್ನಲೆ ರೈತರು ಬೆಳೆದ ಬೆಳೆಯ ಮೌಲ್ಯ ಹಾಗೂ ಗ್ರಾಹಕರಿರು ಖರೀದಿಸá-ವ ಮೌಲ್ಯದ ಶೇ.4 ರಿಂದ 5ರಷ್ಟು ದರ ಅಂತರ ಇಟ್ಟು ಸರ್ಕಾರದಿಂದಲೇ ಖರೀದಿಸá-ವ ಚಿಂತನೆ ಮಾಡಿದ್ದು, ಬಜೆಟ್​ನಲ್ಲಿ ಘೊಷಣೆ ಮಾಡಲಿದ್ದೇನೆ. ಇದು ನಾಳೆಯಿಂದಲೇ ಆಗಲ್ಲ. ಇದಕ್ಕೆ ತಯಾರಿ ಮಾಡಿಕೊಳ್ಳಬೇಕು ಎಂದರು.

ಮಾರá-ಕಟ್ಟೆ ಸೃಷ್ಟಿಗೆ ಸರ್ಕಾರ ಸೈ: ರೈತರು ಚುನಾವಣೆ ಬಂದಾಗ ಯಾವ ಪಕ್ಷಕ್ಕಾದರೂ ವೋಟು ಹಾಕಿ. ಬಳಿಕ ಪಕ್ಷ ಪಕ್ಷ ಎಂದು ಪರಸ್ಪರ ಹೊಡೆದಾಡಿಕೊಳ್ಳದೆ ಸ್ವಸಹಾಯ ಗುಂಪು ಮಾಡಿಕೊಂಡು ಹವಾಮಾನಕ್ಕೆ ತಕ್ಕಂತೆ, ಈಗಿನ ಮಳೆ ಪ್ರಮಾಣ ಆಧರಿಸಿ, ಬೆಳೆ ಬೆಳೆದಲ್ಲಿ ಅದಕ್ಕೆ ಸರ್ಕಾರದಿಂದ ಮಾರá-ಕಟ್ಟೆ ಸೃಷ್ಟಿ ಮಾಡಿಕೊಡುವುದಾಗಿ ಸಿಎಂ ಸಲಹೆ ನೀಡಿದರು.

ಸಾಲಮನ್ನಾ ಗೊಂದಲ ಬೇಡ: ರೈತರ ಸಾಲಮನ್ನಾ ವಿಷಯದಲ್ಲಿ ಅಪನಂಬಿಕೆ ಬೇಡ. ನನ್ನ ಮೇಲೆ ವಿಶ್ವಾಸವಿಡಿ. 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ. ಇದಕ್ಕಾಗಿ ಯಾವುದೇ ಅಭಿವೃದ್ಧಿ ಯೋಜನೆಗಳ ಬಿಡಿಗಾಸು ಬಳಕೆ ಮಾಡಿಲ್ಲ. ಅಪಪ್ರಚಾರ ನಂಬಲೇಬೇಡಿ. ಸಾಲಮನ್ನಾಕ್ಕಾಗಿ ಈ ವರ್ಷ ಪ್ರತ್ಯೇಕ 9 ಸಾವಿರ ಕೋಟಿ ರೂ. ತೆಗೆದಿರಿಸಿದ್ದೇನೆ. ಸಹಕಾರಿ ಬ್ಯಾಂಕ್​ಗಳಲ್ಲಿ ರೈತರ ಒಂದು ಲಕ್ಷ ರೂ. ವರೆಗಿನ ಬೆಳೆಸಾಲ ಮನ್ನಾಕ್ಕೆ 9458 ಕೋಟಿ ರೂ. ಬೇಕು. ಬೆಳಗಾವಿ ಅಧಿವೇಶನದಲ್ಲಿ ಎರಡá-ವರೆ ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ ಪಡೆದಿದ್ದೇನೆ. ಮೊದಲ ಹಂತದ ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾಗೆ 6500 ಕೋಟಿ ರೂ. ಹಣ ಹಂಚಿಕೆ ಮಾಡಿದ್ದು, ಇದ್ಯಾವುದಕ್ಕೂ ಬೇರೆ ಯೋಜನೆಗಳ ಹಣ ಉಪಯೋಗ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ತೋವಿವಿ ನೀರಿಗೆ ಮೂರು ದಿನದಲ್ಲಿ ಹಣ:ಬಾಗಲಕೋಟೆ ತೋಟಗಾರಿಕೆ ವಿವಿಗೆ ಅಗತ್ಯ ಇರá-ವ ಜಮೀನು ಒದಗಿಸá-ವುದು ಹಾಗೂ ಮುಖ್ಯವಾಗಿ ನೀರಿನ ಸಮಸ್ಯೆ ಬಗೆಹರಿಸá-ವ ನಿಟ್ಟಿನಲ್ಲಿ ಅಗತ್ಯವಿರá-ವ ಅನá-ದಾನವನ್ನು ಮೂರು ದಿನಗಳಲ್ಲಿ ಬಿಡá-ಗಡೆ ಮಾಡá-ವುದಾಗಿ ಸಿಎಂ ಕುಮಾರಸ್ವಾಮಿ ಅಭಯ ನೀಡಿದ್ದಾರೆ.

ಬಾಗಲಕೋಟೆ ತೋವಿವಿಯಲ್ಲಿ ಸೋಮವಾರ ಏಳನೇ ತೋಟಗಾರಿಕೆ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ, ಶಾಸಕ ವೀರಣ್ಣ ಚರಂತಿಮಠ, ಕುಲಪತಿ ಡಾ. ಕೆ.ಎಂ.ಇಂದಿರೇಶ ಮಾಡಿದ ಮನವಿಗೆ ಸ್ಪಂದಿಸಿದ ಸಿಎಂ ಈ ಭರವಸೆ ನೀಡಿದ್ದಾರೆ.

ತೋಟಗಾರಿಕೆ ವಿವಿಗೆ ನೀರಿನ ಸಮಸ್ಯೆ ಇದೆ ಎಂದು ಗಮನಕ್ಕೆ ತಂದಿದ್ದಾರೆ. ಒಬ್ಬರು 8 ಕೋಟಿ ರೂ. ಅಂದರೆ, ಮತ್ತೊºರು 20 ಕೋಟಿ ರೂ. ಎಂದು ಹೇಳಿದ್ದಾರೆ. ಅದು ಎಷ್ಟೇ ಆಗಿರಲಿ, ಎರಡ್ಮೂರು ದಿನಗಳಲ್ಲಿ ಅಗತ್ಯ ಅನá-ದಾನ ಬಿಡá-ಗಡೆ ಮಾಡá-ತ್ತೇನೆ. ಜತೆಗೆ ಘಟಪ್ರಭಾ ಹಿನ್ನೀರಿನಿಂದ ವಿವಿಗೆ ನೀರು ತರುವ ಯೋಜನೆ ಅನá-ಷ್ಠಾನಕ್ಕೆ ತರುವ ಬಗ್ಗೆ ಆಲೋಚಿಸೋಣ ಎಂದರು.

ನಾನು ಉತ್ತರ ವಿರೋಧಿಯಲ್ಲ:ನಾನು ಉತ್ತರ ಕರ್ನಾಟಕದ ವಿರೋಧಿಯಲ್ಲ. ಈ ಹಿಂದೆ ಸಿಎಂ ಆಗಿದ್ದಾಗಲೂ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಈಗಲೂ ಹಳೇ ಕರ್ನಾಟಕ, ಉತ್ತರ ಕರ್ನಾಟಕ ಎನ್ನದೆ ಸಮಗ್ರ ಅಭಿವೃದ್ಧಿಗೆ ನನ್ನದೇ ಕಲ್ಪನೆಗಳು ಇವೆ. ಅವುಗಳನ್ನು ಜಾರಿಗೊಳಿಸಲು ಸ್ವಲ್ಪ ಸಮಯಾವಕಾಶ ಕೊಡಿ. ನನ್ನ ಮೇಲೆ ವಿಶ್ವಾಸ ಇಡಿ. ನನ್ನನ್ನು ವಿರೋಧಿ ಎನ್ನದೆ ನಿಮ್ಮ ಮನೆಯ ಅಣ್ಣ-ತಮ್ಮ ಎಂದು ಭಾವಿಸಿ, ನಿಮ್ಮ ಋಣ ತೀರಿಸá-ವ ಕೆಲಸ ಮಾಡá-ತ್ತೇನೆ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಜಿಲ್ಲೆ ಅಭಿವೃದ್ಧಿ ಚರ್ಚೆಗೆ ಒಂದು ದಿನ ಮೀಸಲು:ರಾಜ್ಯದ ಏಕೈಕ ತೋಟಗಾರಿಕೆ ವಿಶ್ವವಿದ್ಯಾಲಯ ಸಮಸ್ಯೆ ಬಗೆಹರಿಸá-ವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಹಂತ ಹಂತವಾಗಿ ತೆಗೆದá-ಕೊಳ್ಳ್ಳುತ್ತೇವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಜನವರಿ ಮೊದಲ ವಾರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಇಲ್ಲಿಯೇ ಇದ್ದು, ಈ ಬಗ್ಗೆ ಚರ್ಚೆ ನಡೆಸá-ವುದಾಗಿ ಘೊಷಿಸಿದರು. ಬಾಗಲಕೋಟೆ ಜಿಲ್ಲೆ ಸಮೃದ್ಧ ಜಿಲ್ಲೆಯಾಗಿದೆ. ಇಲ್ಲಿ ಬರೀ ವಿವಿಯನ್ನು ಬಲಪಡಿಸá-ವುದಷ್ಟೇ ಅಲ್ಲದೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದೆ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸá-ವ ಮೂಲಕ ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಲು ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆ ನಗರವನ್ನು 527 ಮೀಟರ್​ವರೆಗೆ ಮುಳುಗಡೆ ಮಾಡಬೇಕೆಂದು ಬಿಜೆಪಿ ಸರ್ಕಾರದಲ್ಲಿ ಸಂಪುಟದಲ್ಲಿ ತೀರ್ವನಿಸಲಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಅದನ್ನು 525ಕ್ಕೆ ಇಳಿಸಿತು. ಬಾಗಲಕೋಟೆ ಅಭಿವೃದ್ಧಿಗಾಗಿ ನಗರವನ್ನು ಸಂಪೂರ್ಣ ಮುಳುಗಡೆ ಮಾಡಿ ಶಾಶ್ವತ ಪರಿಹಾರ ದೊರಕಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತಿಲ್ಲ, ನಮ್ಮ ಜಿಲ್ಲೆಯ 2.30 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಸಿಗಬೇಕು, ನೀರಾವರಿಗಾಗಿ ತ್ಯಾಗ ಮಾಡಿದ ಸಂತ್ರಸ್ತರಿಗೆ ಯೋಗ್ಯ ಪುನರ್ವಸತಿ ಸಿಗಬೇಕು. ಈ ಕುರಿತು ಸಮಗ್ರವಾಗಿ ರ್ಚಚಿಸಿ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳು ಉನ್ನತ ಮಟ್ಟದ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಯೋಜನಾ ವೆಚ್ಚ ಏರಿಕೆ:ಶಾಸಕ ವೀರಣ್ಣ ಚರಂತಿಮಠ ಅವರು ತಮ್ಮ ಭಾಷಣದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬದ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದಕ್ಕೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ಜಗದೀಶ ಶೆಟ್ಟರ ಸಿಎಂ ಆಗಿದ್ದಾಗ 17200 ಕೋಟಿ ರೂ. ಯೋಜನೆ ಇವತ್ತು ಒಂದು ಲಕ್ಷ ಕೋಟಿ ರೂ.ವರೆಗೂ ಬಂದು ನಿಂತಿದೆ. ಕಾಲಹರಣ ಮಾಡದೇ ಯೋಜನೆಗೆ ವೇಗ ನೀಡಲು ಏನು ಮಾಡಬೇಕು ಅದನ್ನು ಮಾಡೋಣ ಎಂದು ಸಿಎಂ ಹೇಳಿದರು.