ನಾಗಠಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ

ಹೊರ್ತಿ: ನಾಗಠಾಣ ಮತ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಶಾಸಕ ಡಾ. ದೇವಾನಂದ ಚವಾಣ್ ಹೇಳಿದರು.
ಮತಕ್ಷೇತ್ರ ವ್ಯಾಪ್ತಿಯ ನಾಗಠಾಣದಿಂದ ಜಂಬಗಿ ಮತ್ತು ದ್ಯಾಬೇರಿ ಗ್ರಾಮದಲ್ಲಿ ಸಮುದಾಯ ಭವನ, 625 ಲಕ್ಷ ರೂ. ವೆಚ್ಚದ ಸುಸಜ್ಜಿತ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾಗಠಾಣ ಕ್ಷೇತ್ರವು ಅತಿ ಹಿಂದುಳಿದ ಕ್ಷೇತ್ರವಾಗಿದ್ದು, ಇನ್ನೂವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕಂಡಿರುವುದಿಲ್ಲ. ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಚುನಾಯಿಸಿದ್ದಾರೆ. ಅವರ ಆಸೆ ಹುಸಿಗೊಳಿಸುವುದಿಲ್ಲ. ಚಡಚಣ ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿಸಲು 4 ಕೋಟಿ ರೂಪಾಯಿ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಪ್ರತಿಯೊಂದು ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡಿ ಮತದಾರರ ಪ್ರೀತಿ ಗೆಲ್ಲುವಲ್ಲಿ ಯಶಸ್ವಿಯಾಗುವೆ. ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ಡಾ. ಸುನೀತಾ ಚವಾಣ್‌ರನ್ನು ಪರಾಭವಗೊಂಡಿದ್ದಕ್ಕೆ ನನ್ನಲ್ಲಿ ಎಳ್ಳಷ್ಟೂ ಬೇಸರವಿಲ್ಲ. ನೀವುಗಳು ನನ್ನನ್ನು ಯಾವಾಗಲೂ ಕೈ ಬಿಡುವುದಿಲ್ಲವೆಂಬ ಆತ್ಮವಿಶ್ವಾಸವಿದೆ ಎಂದರು.
ಇದೇ ವೇಳೆ ಉಕುಮನಾಳದ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರು ಮಾಡಿ ಕಾಮಗಾರಿ ಪ್ರಾರಂಭಿಸಿದರು. ಮುಖಂಡ ಚಂದ್ರಶೇಖರ ಅರಕೇರಿ ಮಾತನಾಡಿದರು.
ಶರಣು ಅರಕೇರಿ, ಬಸು ಹಳ್ಳಿ, ಹಣಮಂತ ಹೊಸಟ್ಟಿ, ಪೈಗಂಬರ್ ಮುಲ್ಲಾ, ರವಿ ದೇಶಮುಖ, ಮಹಾಂತೇಶ ದೇಸಮುಖ, ಮಳಗು ಇಂಡಿ, ರಾಮು ಭೀಮರಾಯ, ಗುತ್ತಿಗೆದಾರ ಎಂ.ಆರ್. ತಾಂಬೂಳೆ, ಸಹಾಯಕ ನಿರ್ವಾಹಕ ಅಭಿಯಂತರ ಮಜೂಮದಾರ, ಇಂಜಿನಿಯರ್ ಸಜ್ಜನ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *