ಮುರಾರ್ಜಿ ವಸತಿ ಶಾಲೆಗೆ ಶಾಸಕ ಚವಾಣ್ ದಿಢೀರ್ ಭೇಟಿ

ಹೊರ್ತಿ: ಮರಗೂರ ಗ್ರಾಮದ ಮುರಾರ್ಜಿ ವಸತಿ ಶಾಲೆಗೆ ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ಡಾ. ದೇವಾನಂದ ಚವಾಣ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ, ಊಟದ ಅವ್ಯವಸ್ಥೆ, ಪ್ರತಿದಿನ ಒಂದೇ ರೀತಿಯ ಆಹಾರ ಪದಾರ್ಥ ತಯಾರಿಸುತ್ತರುವುದು ಸೇರಿ ಇತರ ಸಮಸ್ಯೆಗಳ ಮಾಹಿತಿ ಪಡೆದರು. ನಂತರ ಮುಖ್ಯಶಿಕ್ಷಕ ಎಸ್.ಎಂ. ಪಾಟೀಲ ಅವರ ಜತೆ ಮಾತನಾಡಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಬಾಲಕಿಯರ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಬೇಕು. ದಿನನಿತ್ಯ ಒಂದೇ ತರಹದ ತರಕಾರಿ ನೀಡಬೇಡಿ. ಬಾಳೆಹಣ್ಣು, ಮೊಟ್ಟೆ ಊಟದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕಟ್ಟು ನಿಟ್ಟಾಗಿ ಸೂಚಿಸಿದರು.
ವಸತಿ ಶಾಲೆ ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಮರಗೂರ ಗ್ರಾಮದಿಂದ ವಸತಿ ಶಾಲೆಗೆ ಡಾಂಬರ್ ರಸ್ತೆ ನಿರ್ಮಿಸಿ ಕೊಡುವಂತೆ ಶಿಕ್ಷಕರು ಶಾಸಕರಿಗೆ ಮನವಿ ಮಾಡಿದರು.
ಮುಖಂಡರಾದ ರವಿ ಚವಾಣ್, ತಾಪಂ ಸದಸ್ಯ ರವಿದಾಸ ಜಾಧವ, ಯುನುಸ್ ಮಕಾನದಾರ, ಸದಾಶಿವ ಜತ್ತಿ, ಭೀಮು ವಾಳಿಖಿಂಡಿ, ಹಣಮಂತ ಕೋರೆ, ಶಾಂತುಗೌಡ ಬಿರಾದಾರ, ದಯಾನಂದ ಕಸಮೋಳೆ, ಮಲ್ಲುಗೌಡ ಬಿರಾದಾರ, ಸುರೇಶ ಪದಮಗೊಂಡ, ಬಂದುಲಾಲ ನದಾಫ ಇದ್ದರು.

Leave a Reply

Your email address will not be published. Required fields are marked *