ಕಾರಹುಣ್ಣಿಮೆ ಸಂಭ್ರಮ

ಹೊರ್ತಿ: ಕಾರಹುಣ್ಣಿಮೆ ಕರಿ ಹರಿಯುವ ಆಚರಣೆ ಜೂ.17 ರಂದು ನಡೆಯುವ ಹಿನ್ನೆಲೆ ಶನಿವಾರ ರೈತರು ತಮ್ಮ ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವುದು ಮಾರುಕಟ್ಟೆಯ ಎಲ್ಲೆಡೆ ಸಾಮಾನ್ಯವಾಗಿತ್ತು.
ದಾಂಡ, ಮಗಡ, ಕೊಮ್ಮೆಣಸು, ಗೆಜ್ಜೆಸರ, ಗಂಟೆ, ಸರಪಳಿ ಹಾಗೂ ಜೂಲಾಗಳ ಬೆಲೆ ಹೆಚ್ಚಾಗಿದ್ದರಿಂದ ಬರದಿಂದ ತತ್ತರಿಸಿದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ನಡುವೆಯೂ ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲೇಬೆಂಬ ಉತ್ಸಾಹದಿಂದ ಅನಿವಾರ್ಯವಾಗಿ ಹೆಚ್ಚಿನ ಬೆಲೆ ಕೊಟ್ಟು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹುಣ್ಣಿಮೆ ದಿನ ಕರಿ ಹರಿಯುವ ಕಾರ್ಯಕ್ರಮಕ್ಕೆ ಹಳ್ಳಿಗಳಲ್ಲಿ ಸಕಲ ಸಿದ್ಧತೆ ನಡೆದಿದೆ.
ಬರದಿಂದ ನಮ್ಮ ಕೈಯಲ್ಲಿ ಹಣ ಇಲ್ಲ. ಆದರೂ ಹಬ್ಬ ಮಾಡಬೇಕಂತ ಸಾಲ ಮಾಡಿ ಬಸವಣ್ಣಗೆ ಸಿಂಗಾರ ಮಾಡಲು ವಸ್ತುಗಳ ಖರೀದಿ ಮಾಡುತ್ತಿದ್ದೇನೆ. ವರ್ಷಪೂರ್ತಿ ನಮ್ಮ ಸೇವೆ ಮಾಡೋ ಬಸವಣ್ಣಗೆ ಸಿಂಗಾರ ಮಾಡಿ ಪೂಜೆ ಸಲ್ಲಿಸುತ್ತೇವೆ ಎಂದು ಹೊರ್ತಿ ಗ್ರಾಮದ ರೈತ ಶರಣಬಸಪ್ಪ ಡೋಣಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *