ಕುಡಿವ ನೀರಿಗಾಗಿ ಜನರ ಪರದಾಟ

ಹೊರ್ತಿ: ಬೋರದಾಗ ನೀರ ಅದಾವು, ಆದರ ಮೋಟಾರ್ ಕೇಬಲ್ ಸುಟ್ಟು 6 ತಿಂಗಳಾಯ್ತು, ಪಂಚಾಯ್ತಿಯವರು ರಿಪೇರಿ ಮಾಡಿಸಿಲ್ಲ. ನಾವ್ ಹೆಣ್ಮಕ್ಕಳು ತಿರಗಾಡಿ ಕುಡ್ಯಾಕ ನೀರು ತರಲಕ್ಕತ್ತೀವಿ, ನಮ್ಗ ನೀರಿನ ಕಾಲಾಗ ಸಾಕಾಗೈತಿ…
ಇದು ಗ್ರಾಮದ ಬಸವೇಶ್ವರ ನಗರ ನಿವಾಸಿ ಮಹಿಳೆಯರ ಅಳಲು.
ಬಸವೇಶ್ವರ ನಗರದಲ್ಲಿ ಅಂದಾಜು 300 ಜನಸಂಖ್ಯೆ ಇದೆ. ಗ್ರಾಪಂರವರು ಬೋರವೆಲ್ ಕೊರೆಸಿ ನೀರಿನ ಅನುಕೂಲ ಮಾಡಿದ್ದಾರೆ. ಇದರ ಹತ್ತಿರ ಶುದ್ಧ ನೀರಿನ ಘಟಕವೂ ಇದೆ. ಆದರೆ ಕಳೆದ 6 ತಿಂಗಳಿಂದ ಮೋಟಾರ್ ಸುಟ್ಟಿದ್ದರಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ನಿವಾಸಿಗಳು ಪಂಚಾಯಿತಿಗೆ ಸಾಕಷ್ಟು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.
ಬಡವರು ಪ್ರತಿದಿನ ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸುವುದೇ ಕಷ್ಟ. ನೀರು ಖರೀದಿ ಮಾಡಿಲು ಹಣವಿಲ್ಲದೆ ಬಡವರು ಕುಡಿಯುವ ನೀರಿಗಾಗಿ ಓಣಿ, ಓಣಿ ಸುತ್ತಾಡುವ ಪರಿಸ್ಥಿತಿ ಬಂದೊದಗಿದೆ. ಮಹಿಳೆಯರು ಮನೆಗೆಲಸ ಬದಿಗಿಟ್ಟು ನೀರು ಹುಡುಕುತ್ತ ಅಲೆಯುವುದು ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಬೋರವೆಲ್ ಮೋಟಾರ್ ಸುಟ್ಟು ಆಗಿರುವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅದಷ್ಟು ಬೇಗನೇ ಸಮಸ್ಯೆ ಸರಿಪಡಿಸಲಾಗುವುದು.
ರವಿ ಕರಜಗಿ ಪಿಡಿಒ ಹೊರ್ತಿ ಗ್ರಾಪಂ

Leave a Reply

Your email address will not be published. Required fields are marked *