ಹಲೇಜಿಯಲ್ಲಿ ಕುದುರೆಗಳ ಕಾಟ!

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುದುರೆಯ ಖರಪುಟಗಳ ಸದ್ದು ಕೇಳುವುದು ತೀರಾ ವಿರಳ. ಆದರೆ ಇತ್ತೀಚೆಗೆ ವಿಶೇಷ ಎಂಬಂತೆ ಕೆಲವರು ಖರೀದಿಸಿ ಸಾಕುತ್ತಿದ್ದು, ಅಲ್ಲಲ್ಲಿ ಕಾಣಸಿಗುತ್ತಿವೆ. ಕೆಲ ಮಾಲೀಕರು ಈ ಕುದುರೆಗಳನ್ನು ಮೇಯಲು ರಸ್ತೆಗೆ ಬಿಟ್ಟು ಅಪಾಯ ಸೃಷ್ಟಿಸುತ್ತಿದ್ದಾರೆ.
ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆಯ ಪಿಲಿಗೂಡಿನಿಂದ ಹಲೇಜಿ ಎಂಬಲ್ಲಿ ಎರಡು ಕುದುರೆಗಳು ನಿತ್ಯ ಓಡಾಡುವವರಿಗೆ ಕಾಣಸಿಗುತ್ತಿವೆ. ಸ ದಾ ರಸ್ತೆ ಬದಿಯಲ್ಲಿ ಓಡಾಡಿಕೊಂಡಿದ್ದು ವಾಹನ ಚಾಲಕರಿಗೆ ಗೊಂದಲ ಮೂಡಿಸುತ್ತಿವೆ. ಈ ಕುದುರೆಯ ಕುತ್ತಿಗೆಗೆ ಹಗ್ಗವನ್ನೂ ಬಿಗಿದಿದ್ದು, ಕಟ್ಟಿ ಹಾಕಲು ಬಳಸುವ ಉದ್ದದ ಹಗ್ಗ ರಸ್ತೆಯಲ್ಲಿ ಹರಡಿಕೊಂಡಿರುತ್ತದೆ. ಇದು ವಾಹನ ಸವಾರರಿಗೆ ಹೆಚ್ಚು ಅಪಾಯಕಾರಿಯಾಗಿದೆ.
ಸದಾ ರಸ್ತೆಯಲ್ಲಿ ಓಡಾಡುವ ಈ ಕುದುರೆಗಳನ್ನು ಅದರ ಮಾಲಿಕರು ಚಿಂತೆಯೇ ಇಲ್ಲವೆಂಬಂತೆ ರಸ್ತೆಗೆ ಬಿಟ್ಟಿದ್ದಾರೆ. ದಿನಕ್ಕೆ ಒಂದು ಹೊತ್ತಾದರೂ ಈ ಮೂಕ ಪ್ರಾಣಿಗಳಿಗೆ ಆಹಾರವನ್ನೂ ನೀಡುವ ಪರಿಜ್ಞಾನವನ್ನೂ ಅವರು ತೋರುತ್ತಿಲ್ಲ. ಆದ್ದರಿಂದ ಆಹಾರಕ್ಕಾಗಿ ದಿನವಿಡೀ ರಸ್ತೆಯಲ್ಲಿ ತಿರುಗಾಡುತ್ತಿವೆ ಎಂದು ಸಾರ್ವಜನಿಕರು ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *