ಮೇಷ: ಹತ್ತಾರು ಬಗೆಯ ಒತ್ತಡಗಳನ್ನು ಸೃಷ್ಟಿಸಿಕೊಂಡು ಪರದಾಡುವ ಹಾಗಾಗುತ್ತದೆ. ತುಸು ನಿಯಂತ್ರಣ ಇರಲಿ. ಶುಭಸಂಖ್ಯೆ: 2
ವೃಷಭ: ಕೀಳರಿಮೆಯಿಂದ ಬಳಲಬೇಡಿ. ಹಿರಿಯರ ಸಹಾಯದಿಂದ ನಿಮ್ಮದಾದ ಸಬಲತೆಗೆ ಅವಕಾಶ ಇದ್ದೇ ಇದೆ. ಶುಭಸಂಖ್ಯೆ: 7
ಮಿಥುನ: ಶುಭವಾದುದನ್ನು ಅನುಗ್ರಹಿಸಲು ಅಶ್ವಿನೀದೇವತೆಗಳನ್ನು ಭಕ್ತಿಯಿಂದ ಆರಾಧಿಸಿ. ಜಯ ದೊರೆಯಲಿದೆ. ಶುಭಸಂಖ್ಯೆ: 1
ಕಟಕ: ಬುದ್ಧಿಕೌಶಲದಿಂದಲೇ ಗೆಲುವು ಸಾಧಿಸಬೇಕು. ಎದುರಾಳಿಗಳನ್ನು ಬಗ್ಗು ಬಡಿಯಲು ತಾಳ್ಮೆಯೇ ಅತ್ಯುತ್ತಮ. ಶುಭಸಂಖ್ಯೆ: 4
ಸಿಂಹ: ತಪ್ಪು ವ್ಯಕ್ತಿಯನ್ನು ಸಂದರ್ಶಿಸಿ ಪರಿಹಾರವನ್ನು ಕಂಡುಕೊಳ್ಳಲು ಹೋಗದಿರಿ. ಹೆಚ್ಚಿನದಾದ ಎಚ್ಚರ ಮಾತ್ರ ಇರಲಿ. ಶುಭಸಂಖ್ಯೆ: 2
ಕನ್ಯಾ: ಯಡಿಯೂರು ಶ್ರೀ ಸಿದ್ಧಲಿಂಗೇಶ್ವರನನ್ನು ಭಕ್ತಿಯಿಂದ ಸ್ತುತಿಸಿ. ಮನದ ಸಂಕಲ್ಪಕ್ಕೆ ಯಶಸ್ಸು ಸಿದ್ಧಿಸಲಿದೆ. ಶುಭಸಂಖ್ಯೆ: 7
ತುಲಾ: ನಿಮ್ಮ ನಿರೀಕ್ಷೆಯ ಪ್ರಕಾರವೇ ದಿನವು ಸಾಗುತ್ತದೆ. ಆದರೆ ಇಂದು ನೀಲಿಯ ಬಣ್ಣದ ಬಟ್ಟೆಯನ್ನು ಧರಿಸದಿರಿ. ಶುಭಸಂಖ್ಯೆ: 5
ವೃಶ್ಚಿಕ: ಹೊಸ ಹೊಸ ವಿಚಾರಗಳ ಸಾಕಾರಕ್ಕೆ ಮುನ್ನುಗ್ಗದಿರಿ. ಪ್ರಸ್ತುತ ಇರುವುದನ್ನೇ ಚೇತರಿಕೆಗೆ ತಂದಲ್ಲಿ ಕ್ಷೇಮವಿದೆ. ಶುಭಸಂಖ್ಯೆ: 3
ಧನಸ್ಸು: ಸರ್ಪದೋಷದ ನಿವಾರಣೆಗಾಗಿ ಶಂಖಪಾಲ ಸ್ತೋತ್ರದ ಪಾರಾಯಣ ಮಾಡಿ. ಮನಃಶಾಂತಿ ಲಭಿಸಲಿದೆ. ಶುಭಸಂಖ್ಯೆ: 9
ಮಕರ: ನೀವು ಚತುರರು. ಆದ್ದರಿಂದ ಸಹೋದ್ಯೋಗಿಗಳ ಅಸೂಯೆ ಕೂಡ ಜಾಸ್ತಿ. ದುಷ್ಟರ ಕುರಿತು ಜಾಗ್ರತೆ ಇರಲಿ. ಶುಭಸಂಖ್ಯೆ: 1
ಕುಂಭ: ನಿಮ್ಮ ಚಾತುರ್ಯದ ವಿಚಾರ ಮುಗ್ಗರಿಸಲಿದೆ. ಆದಿತ್ಯಹೃದಯ ಸ್ತೋತ್ರವನ್ನು ಪಠಿಸಿ. ಚೇತರಿಕೆ ಗಳಿಸಿಕೊಳ್ಳಿ. ಶುಭಸಂಖ್ಯೆ: 6
ಮೀನ: ಹಣಕಾಸಿನ ವಿಚಾರದಲ್ಲಿ ವಿಶೇಷ ಎಚ್ಚರ ಹೊಂದುವ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡಿದ್ದರೆ ಉತ್ತಮ. ಶುಭಸಂಖ್ಯೆ: 8