ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಹೊರ್ತಿ: ಸಾಲಬಾಧೆ ತಾಳಲಾರದೆ ಜಿಗಜೇವಣಿ ಗ್ರಾಮದ ರೈತ ಶ್ರೀಶೈಲ ಕಾಸಣ್ಣ ಬಳಗಾನೂರ(45) ಭಾನುವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅವರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತ ರೈತ 6 ಎಕರೆ ಜಮೀನು ಹೊಂದಿದ್ದನು. ಹೊರ್ತಿ ಸಿಂಡಿಕೇಟ್ ಬ್ಯಾಂಕಿನಲ್ಲಿ 6.75 ಲಕ್ಷ ರೂ. ಕೃಷಿ ಸಾಲ, ಗ್ರಾಮೀಣ ಬ್ಯಾಂಕ್‌ನಲ್ಲಿ 1.50 ಲಕ್ಷ ರೂ. ಸೇರಿ ಅಲ್ಲಲ್ಲಿ 10 ಲಕ್ಷ ರೂ. ಕೈಗಡ ತೆಗೆದುಕೊಂಡಿದ್ದನು. ಒಬ್ಬ ಮಗನಿಗೆ ಎರಡೂ ಕಿಡ್ನಿ ವಿಲವಾಗಿದ್ದರಿಂದಾಗಿ ಚಿಕಿತ್ಸೆಗಾಗಿ ಸಾಲ ಮಾಡಿದ್ದು, ಸಾಲ ತೀರಿಸಲು ಹೆದರಿ ಆತ್ಮಹತ್ಯೆ ಮಾಡಿದ್ದಾನೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರಿಂದ ಸಾಂತ್ವನ
ಮೃತ ರೈತನ ಕುಟುಂಬಕ್ಕೆ ನಾಗಠಾಣ ಕ್ಷೇತ್ರದ ಶಾಸಕ ಡಾ. ದೇವಾನಂದ ಚವಾಣ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಮೃತ ರೈತನ ಮಗನ ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.