ತಾಜ್​ಮಹಲ್​ನಿಂದಾದರೂ ಮೋದಿ ಅವರು ಪ್ರೀತಿ ಪಾಠ ಕಲಿಯಲಿ: ಅಖಿಲೇಶ್​ ಯಾದವ್​

ಆಗ್ರಾ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉತ್ತರಪ್ರದೇಶದ ಆಗ್ರಾಗೆ ಭೇಟಿ ನೀಡುವುದಕ್ಕಿಂತ ಕೆಲ ಗಂಟೆಗಳ ಮುಂಚೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಕುರಿತು ವ್ಯಂಗ್ಯವಾಡಿದ್ದಾರೆ.

“ಪ್ರಧಾನಿ ಮೋದಿ ಅವರು ತಾಜ್​ಮಹಲ್​ನಿಂದಾದರೂ ಪ್ರೀತಿಯ ಬಗ್ಗೆ ಸ್ವಲ್ಪವಾದರೂ ಕಲಿಯುತ್ತಾರೆ ಎಂದೆನಿಸುತ್ತದೆ” ಎಂದು ಟ್ವೀಟ್​ ಮಾಡುವ ಮೂಲಕ ಮೋದಿಯವರನ್ನು ಟೀಕಿಸಿದ್ದಾರೆ.

ಹಾಗೆಯೇ ಮೋದಿ ಅವರ ಆನಂದ ವಿಹಾರದ ನಂತರ ಆಗ್ರಾ ಸುತ್ತಮುತ್ತಲಿನ ಆಲೂಗಡ್ಡೆ, ಕಬ್ಬು ಮತ್ತು ಭತ್ತ ಬೆಳೆಗಾರರ ಸಂಕಷ್ಟಗಳೂ ಅವರಿಗೆ ಅರ್ಥವಾಗಲಿದೆ. ಈ ಹಿಂದೆ ಉತ್ತರಪ್ರದೇಶದಿಂದ ದೆಹಲಿ ಬಹಳ ದೂರವೇನಿರಲಿಲ್ಲವಾದರೂ ಆಡಳಿತಗಾರರಿಗೆ ಇಲ್ಲಿನ ರೈತರು ಮತ್ತು ವ್ಯಾಪಾರಿಗಳ ಸಮಸ್ಯೆ ಕಣ್ಣಿಗೆ ಕಂಡಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)