ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ನಟಿಯಿಂದ ಬಾಯ್​ಫ್ರೆಂಡ್​ನ ಕರಾಳ ಮುಖ ಬಯಲು

ಮುಂಬೈ: ಭಾರತದಲ್ಲಿ ಮೀಟೂ ಚಳುವಳಿ ಹೆಚ್ಚು ಚರ್ಚೆಗೆ ಬಂದಿದ್ದ ಸಮಯದಲ್ಲಿ ತನ್ನ ಸಹೋದ್ಯೋಗಿ ಮತ್ತು ಬಾಯ್​ಫ್ರೆಂಡ್​ನಿಂದ ಅನುಭವಿಸಿದ್ದ ಲೈಂಗಿಕ ದೌರ್ಜನ್ಯ ಬಗ್ಗೆ ಮಾತನಾಡಿದ್ದ ನಟಿ ಹಾಗೂ ಬರಹಗಾರ್ತಿ ಶ್ರುತಿ ಚೌಧರಿ, ಇದೀಗ ‘ಹ್ಯುಮನ್ಸ್​ ಆಫ್​ ಬಾಂಬೆ’ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಆತನ ಕೈಗಳಿಗೆ ಸಿಲುಕಿ ಅನುಭವಿಸಿದ ನೋವಿನ ಕರಾಳ ಘಟನೆಯನ್ನು ವಿವರಿಸಿದ್ದಾರೆ.
ಅಲ್ಲದೆ ನನ್ನ ಕತೆ ಸಾಕಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ ಎಂದು ಪೋಸ್ಟ್​ ಮಾಡಿದ್ದಾರೆ. ಈ ಹಿಂದೆಯೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಘಟನೆ ಬಗ್ಗೆ ಬರೆದುಕೊಂಡಿದ್ದರು.

ಸ್ಕಾಟ್​ಲೆಂಡ್​ ಟ್ರಿಪ್​ಗೆ ಕರೆದೊಯ್ಯಲು ತನ್ನ ಬಾಯ್​ ಫ್ರೆಂಡ್ ಒತ್ತಾಯ ಮಾಡಿದ್ದನ್ನು ಈ ಹಿಂದೆ ಮೆಲಕು ಹಾಕಿದ್ದ ಶ್ರುತಿ,​ ಪ್ರವಾಸಕ್ಕೆ ತೆರಳಿದಾಗ ನನ್ನ ಜತೆ ಅವನಿಗೆ ಮಲಗಲು ಅವಕಾಶ ಕೊಡಬಾರದು ಎಂದು ಯೋಚನೆ ಮಾಡಿದ್ದೆ. ಆದರೆ, ನನ್ನಿಂದ ಸಾಧ್ಯವಾಗಲಿಲ್ಲ. ಆ ಕ್ಷಣ ತುಂಬಾ ಕೆಟ್ಟದಾಗಿತ್ತು. ಆತ ತುಂಬಾ ಕಠೋರವಾಗಿ ನಡೆದುಕೊಂಡ. ನನ್ನನ್ನು ಕಚ್ಚಲು ಪ್ರಾರಂಭಿಸಿದ. ಇದರಿಂದ ನಾನು ಸಾಕಷ್ಟು ನೋವು ಅನುಭವಿಸಿದೆ. ಆ ಸಮಯದಲ್ಲಿ ಇದೊಂದು ದುರುಪಯೋಗವೆಂಬುದು ನನಗೆ ಗೊತ್ತಿರಲಿಲ್ಲ ಎಂದು ತಮ್ಮ ನೋವಿನ ಸಂಗತಿಯನ್ನು ಶ್ರುತಿ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

ಬಾಯ್​ಫ್ರೆಂಡ್​ ಬಂಡವಾಳ ಗೊತ್ತಾದ ಬಳಿಕ ಆತನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟರೂ ಕೂಡ ಶ್ರುತಿ ಅವರು ಅವನೊಂದಿಗೆ ಉದ್ಯೋಗ ಮುಂದುವರಿಸಿದರು. ಇಂದು ಏನಾಗಿದೆ ಅದು ಸಂಬಂಧದಿಂದಲೇ ನಡೆದಿದೆ ಎಂದು ಆನಂತರ ಗೊತ್ತಾಯಿತು ಎಂದು ಶ್ರುತಿ ತಿಳಿಸಿದ್ದಾರೆ.

ಒಮ್ಮೆ ಪ್ರವಾಸಕ್ಕಾಗಿ ರಜೆಯಲ್ಲಿದ್ದ ಸಮಯದಲ್ಲಿ ಒಬ್ಬಳು ನನ್ನನ್ನು ಸಂಪರ್ಕಿಸಿ, ಒಬ್ಬನಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ತಿಳಿಸಿದಳು. ಅವಳು ವಿವರಿಸಿದ ಘಟನೆ ಕೇಳಿದಾಗ ನನಗಾದ ರೀತಿಯಲ್ಲೇ ಆಗಿರುವುದು ಅರ್ಥವಾಯಿತು. ಆಗ ನಾನೊಬ್ಬಳೆ ಅಲ್ಲ. ಹಲವರು ಇದೇ ರೀತಿಯ ನೋವನ್ನು ಅನುಭವಿಸಿದ್ದಾರೆ ಎಂಬುದು ಅರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.

ಬಳಿಕ ಘಟನೆಯ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆಯಲು ನಿರ್ಧರಿಸಿ ಪೋಸ್ಟ್​ ಮಾಡಿದ ಕೂಡಲೇ ವೈರಲ್​ ಆದ ಪೋಸ್ಟ್​ನಿಂದ ಆರೋಪಿಯ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಎಂದಿರುವ ಶ್ರುತಿ, ಇಂದು ನನ್ನ ಕತೆ ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

View this post on Instagram

/@officialhumansofbombay “…Today, I only hope that my story inspires other women to fight back. Just know that there’s always someone who has been through what you have and you are never alone.” – You can read the whole post on their official page. – To be honest, when I decided to do this interview, I was under the impression that the narrative would focus on the fight and the breakthrough, rather than the trauma itself. I’ve lived it, then relived it when I decided to share it in October and through this, I’ve had to relive it all over again. I didn’t think it would be a trigger, still. But it is. All the DMs are overwhelming me and it’s all very deja vu. Forgive me if I fail to respond. However, the fight, the struggle, the breakthrough isn’t something a lot of us are privileged to get to. Hell, it’s a big deal to even talk about such incidents without putting yourself out there for unabashed attack. They call me brave, perhaps I was in the moment I decided to tell my story. And then in the moment I did not give up until some sort of justice was achieved. But bravery, just like happiness, isn’t a blanket state of being. It comes in the spur of a moment, then like everything else it leaves. I think the retelling of this incident will inspire many, educate some and fuel a few to take a stand as well. So I thank this portal for that, for the healing and the clarity my sheer honesty will provide. It wasn’t courage, it was exhaustion. I’m tired of living in a world that believes in covering up and burying everything that should be talked about. I’m tired of hiding the bad things and glorifying the good ones. I’m a fucking mess and I own it.

A post shared by Shrutee Choudhary (@shruteechoudhary) on

TRIGGER WARNING“I was the stereotypical small town girl who came to Mumbai to chase her dreams. But once I got here,…

Humans of Bombay ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಏಪ್ರಿಲ್ 30, 2019

Leave a Reply

Your email address will not be published. Required fields are marked *