ಕಲಾದಗಿ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸ್ಥಳೀಯ ಮಾದರ ಕಾಲನಿಯಲ್ಲಿರುವ ಹೂವಿನಮ್ಮ ದೇವಿ ಹಾಗೂ ನಡಿಗೇರಮ್ಮ ದೇವಿ ಜಾತ್ರಾ ಮಹೋತ್ಸವವು ಮೇ 12 ಹಾಗೂ 13ರಂದು ಶ್ರದ್ಧಾ ಭಕ್ತಿಯಿಂದ ಜರುಗಲಿದೆ.

ಮೇ 12 ರಂದು ಮಧ್ಯಾಹ್ನ 2 ಗಂಟೆಗೆ ದೇವಿಯರ ಪಲ್ಲಕ್ಕಿ ಮಹೋತ್ಸವದೊಂದಿಗೆ ಗ್ರಾಮದ ಎಲ್ಲ ದೇವಿಯರಿಗೆ ಉಡಿತುಂಬುವುದು, ಹನುಮಂತ ದೇವರಿಗೆ ಪಾದರಕ್ಷೆ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ.
ಮೇ 13 ರಂದು ಬೆಳಗ್ಗೆ 7 ಗಂಟೆಗೆ ದೇವಿಯರ ಪಲ್ಲಕ್ಕಿ ಮಹೋತ್ಸವದೊಂದಿಗೆ ನದಿಗೆ ತೆರಳಿ ಮಂಗಲಸ್ನಾನ ಸಮರ್ಪಣೆ, 8 ಗಂಟೆಗೆ ಅಗ್ನಿಹಾಯುವುದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
TAGGED:ಕಲಾದಗಿ