ಕಲಾದಗಿ : ಸ್ಥಳೀಯ ಮಾದರ ಕಾಲೋನಿಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಹೂವಿನಮ್ಮ ದೇವಿ ಹಾಗೂ ನಡಿಗೇರಮ್ಮ ದೇವಿಯರ ಜಾತ್ರಾ ಮಹೋತ್ಸವ ಮಂಗಳವಾರ ಅಗ್ನಿಕುಂಡ ಹಾಯುವ ಕಾರ್ಯಕ್ರಮದೊಂದಿಗೆ ಸಂಪನ್ನವಾಯಿತು.

ಬೆಳಗ್ಗೆ ಹೂವಿನಮ್ಮ ದೇವಿ ಹಾಗೂ ನಡಿಗೇರಮ್ಮ ದೇವಿಯರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮಂಗಳವಾದ್ಯದೊಂದಿಗೆ ನದಿಗೆ ತೆರಳಿ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು.
ಪಲ್ಲಕ್ಕಿ ಮಹೋತ್ಸವ ದೇವಾಲಯಕ್ಕೆ ಮರಳಿ ಬರುತ್ತಿದ್ದಂತೆ ದೇವಾಲಯದ ಎದುರು ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದ 15 ಅಡಿ ಉದ್ದದ ಅಗ್ನಿಕುಂಡ ಹಾಯುವ ಸೇವೆ ನಡೆಯಿತು.
ನೂರಾರು ಜನ ಭಕ್ತರು ಯಾವುದೇ ಅಳುಕಿಲ್ಲದೆ ದೇವಿಯ ಜಯ ಘೋಷಮಾಡುತ್ತಾ ಅಗ್ನಿಕುಂಡದಲ್ಲಿ ಹಾಯುವುದರ ಮೂಲ ಭಕ್ತಿ ಪರಾಕಾಷ್ಠೆ ಮೆರೆದರು.
TAGGED:ಕಲಾದಗಿ