ಮೈಲಾರ ಜಾತ್ರೆ ಸಿದ್ಧತೆ ಪರಿಶೀಲನೆ

ಹೂವಿನಹಡಗಲಿ: ತಾಲೂಕಿನ ಮೈಲಾರ ಲಿಂಗೇಶ್ವರ ಕಾರ್ಣಿಕ ಫೆ.22ರಂದು ನಡೆಯುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಇಒ ಯು.ಎಚ್.ಸೋಮಶೇಖರ್ ಮಂಗಳವಾರ ಸಿದ್ಧತೆ ಕುರಿತು ಪರಿಶೀಲಿಸಿದರು. ಜಾತ್ರೆ ವೇಳೆ ಭಕ್ತರ ಅನುಕೂಲಕ್ಕಾಗಿ ಬಸ್ ನಿಲ್ದಾಣ, ತಾತ್ಕಾಲಿಕ ಕುಡಿವ ನೀರಿನ ಟ್ಯಾಂಕರ್‌ಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಿದರು. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ವರ್ತಕರಿಗೆ ಸೂಚಿಸಿದರು. ತಾಲೂಕು ಆಡಳಿತದಿಂದ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತಾಪಂ ಇಒ ಯು.ಎಚ್. ಸೋಮಶೇಖರ್ ಇದ್ದರು. ಗ್ರಾಪಂ ಕಟ್ಟಡ, ಸುತ್ತುಗೋಡೆ ಕಾಮಗಾರಿಗೆ ಚಾಲನೆ ನೀಡಲಾಯಿತು.