ಹುಕ್ಕೇರಿ: ಬಡ ರೋಗಿಗಳಿಗೆ ಹಣ್ಣು ವಿತರಣೆ

ಹುಕ್ಕೇರಿ: ಸ್ಥಳೀಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಂತ ನಿರಂಕಾರಿ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಟ್ರಸ್ಟ್ ಸಂಸ್ಥಾಪಕರ ಜನ್ಮದಿನ ನಿಮಿತ್ತ ಸ್ವಚ್ಛತಾ ಅಭಿಯಾನ ಮತ್ತು ಬಡ ರೋಗಿಗಳಿಗೆ ಹಣ್ಣು ವಿತರಣೆ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಶನಿವಾರ ಮಾತನಾಡಿ ಸಂತ ನಿರಂಕಾರಿ ಮಂಡಳದ ಸ್ಥಳೀಯ ಸಂಯೋಜಕ ಮುಖಿ ಮಾರುತಿ ಮೋರೆ ಗುರುವಿನ ಜನ್ಮದಿನದ ನಿಮಿತ್ತ ದೇಶ-ವಿದೇಶಗಳಲ್ಲಿ ಸಂಘಟನೆಯ ಸದಸ್ಯರು ಸ್ವಚ್ಛತೆ ಜತೆಗೆ ವಿವಿಧ ಜನಮುಖಿ ಕಾರ್ಯ ಹಮ್ಮಿಕೊಂಡಿದ್ದಾರೆ ಎಂದರು.

ಸಂಘಟನೆಯ ಸದಸ್ಯರು ಪ್ರತಿನಿತ್ಯ ಯೋಗ ಮಾಡುವ ಜತೆಗೆ ಸಮಾಜದ ಮೌಢ್ಯತೆ ನಿವಾರಿಸಲು. ಸಂಘಟನೆಯನ್ನು ಹುಟ್ಟು ಹಾಕಿದ ಸಂತ ನಿರಂಕಾರಿ ಬಾಬಾ ಅವರ ಉಪದೇಶವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಗಣ್ಯರಾದ ಚಂದ್ರಶೇಖರ ಗಂಗನ್ನವರ, ಶಿವಾನಂದ ಜಿರಲಿ, ಪಿಕಾರ್ಡ ಬ್ಯಾಂಕ್ ನಿರ್ದೇಶಕ ಬಸಗೌಡ ಪಾಟೀಲ ಮಾತನಾಡಿದರು. ನ್ಯಾಯವಾದಿ ಪ್ರಕಾಶ ಪಾಟೀಲ, ಸಿದ್ದು ಬೆನ್ನಾಡಿಕರ, ಡಾ.ಪ್ರಗತಿ ಬೋರಗಾಂವಿ, ವಿ.ಬಿ.ಸೊಗಲದ, ಭರಮಣ್ಣ ಜಾಧವ, ಸಂತೋಷ ಹಳ್ಳೆನ್ನವರ ಮತ್ತಿತರರು ಪಾಲ್ಗೊಂಡಿದ್ದರು.