ಹುಕ್ಕೇರಿ: ಮತದಾನ ಜಾಗೃತಿ ಮತದಾನ ಶಿಬಿರ

ಹುಕ್ಕೇರಿ: ತಾಲೂಕಿನ ಹೊಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆ 2019 ರ ಪ್ರಯುಕ್ತ ಮತದಾನ ಜಾಗೃತಿ ಕಾರ್ಯಕ್ರಮ ಶನಿವಾರ ಜರುಗಿತು. ಸ್ವೀಪ್ ಸಮಿತಿ ಕಾರ್ಯದರ್ಶಿ ಹಾಗೂ ಸಂಯೋಜಕ ಮಲ್ಲಿಕಾರ್ಜುನ ಗುಡಸಿ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದಲ್ಲಿ ಉಚಿತ ಸಹಾಯವಾಣಿ 1905 ಗೆ ಕರೆ ಮಾಡಲು ತಿಳಿಸಿದರು.

ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಹುಕ್ಕೇರಿ ಪುರಸಭೆ ಅಭಿಯಂತರ ಗೌರಿಶಂಕರ ಮಹಾಳಂಕ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ನಾಯಕರ ಭಾವಚಿತ್ರ, ಬ್ಯಾನರ್ ಹಾಗೂ ಚಿಹ್ನೆ ತೆರವುಗೊಳಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಎಲ್ಲ ಮೂಲ ಸೌಕರ್ಯ ಇರುವಂತೆ ನೋಡಿಕೊಳ್ಳಲಾಗಿದೆ ಎಂದರು. ನಂತರ ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ಮತದಾನ ಜಾಗೃತಿ ಅಭಿಯಾನ ಜರುಗಿತು. ಬೂತ್‌ಮಟ್ಟದ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಗ್ರಾಪಂ ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರು ಇದ್ದರು.