ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೂರನೇ ಸ್ಥಾನ ಪಡೆದ ಹಿನ್ನೆಲೆ ಶನಿವಾರ ಪಾಲಿಕೆ ಪೌರ ಕಾರ್ಮಿ ಕರನ್ನು ಪಾಲಿಕೆ ಕಾಯಂ, ಗುತ್ತಿಗೆ ಪೌರಕಾರ್ಮಿಕರ ಸಂಘದಿಂದ ಸನ್ಮಾನಿಸಲಾಯಿತು.

ನಗರದ 101 ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸಿಹಿ ಹಂಚಿಕೆ ಮಾಡಿ ಸನ್ಮಾನಿಸಲಾಯಿತು. ನಂತರ ದೇವಸ್ಥಾನ ಮುಂಭಾಗ ಈಡುಗಾಯಿ ಒಡೆಯಲಾಯಿತು.
ಮೇಯರ್ ಪುಷ್ಪಲತಾ ಜಗನ್ನಾಥ್, ಆಯುಕ್ತೆ ಶಿಲ್ಪಾನಾಗ್, ಸದಸ್ಯರಾದ ಬಿ.ವಿ.ಮಂಜುನಾಥ್ , ಶೋಭಾ ಸುನೀಲ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎನ್.ಮಾರ ಇತರರು ಇದ್ದರು.