ವಿಜಯಪುರ: ಶ್ರೀ ಸೀತಾರಾಮ ಕಲ್ಯಾಣ ಹಾಗೂ ಶ್ರೀ ಕಲ್ಪವೃಕ್ಷ ಸಂದ 375ನೇ ಪಾರಾಯಣ ನಗರದ ಕೃಷ್ಣ&ವಾದಿರಾಜ ಮಠದಲ್ಲಿ ಜ.5 ರಂದು ಸಂಜೆ 5ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಜಯೇಂದ್ರ ಗುರುನಾಥ ನಾಡಜೋಶಿ ಹಾಗೂ ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಅವರಿಗೆ ಶ್ರೀರಾಮರತ್ನ ಪ್ರಶಸ್ತಿ ನೀಡಲಾಗುತ್ತಿದೆ.
ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಸುರೇಂದ್ರ ಮುತಾಲಿಕ, ಅಕ್ಷತಾ ಗೋವಿಂದ ದೇಶಪಾಂಡೆ, ಅನಂತರಾಜ ಮಿಸಿ, ಶ್ರೀರಂಗ ಪುರಾಣಿಕ, ವಿಲಾಸ ಪುರೋಹಿತ ಅವರಿಗೆ ರಾಮಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂದ ಸಂಚಾಲಕ ಗೋವಿಂದರಾಜ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.